ನವದೆಹಲಿ: ಇಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ NDA ಬೆಂಬಲಿತ ಸಿ.ಪಿ. ರಾಧಾಕೃಷ್ಣನ್ ಅವರು 452 ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸಿದ್ದಾರೆ. ಇಂಡಿ ಮೈತ್ರಿಕೂಟದ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಅವರು 300 ಮತಗಳನ್ನು ಮಾತ್ರ ಪಡೆಯುವುದರೊಂದಿಗೆ ಸೋಲು ಅನುಭವಿಸಿದ್ದಾರೆ. ಒಟ್ಟು 15 ಮತಗಳು ಅಮಾನ್ಯವಾಗಿದ್ದು, ಬಿಆರ್‌ಎಸ್, ಬಿಜೆಡಿ, ಶಿರೋಮಣಿ ಅಕಾಲಿ ದಳ ಸೇರಿದಂತೆ 14 ಮಂದಿ ಸಂಸದರು ಮತದಾನದಿಂದ ಹಿಂದೆ ಸರಿದರು.
ಹಿಂದಿನ ಉಪರಾಷ್ಟ್ರಪತಿ ಜಗದೀಪ್ ಧಂಕರ್ ಅವರು ಆರೋಗ್ಯ ಸಮಸ್ಯೆ ಕಾರಣ ನೀಡಿ ಜುಲೈ 21ರಂದು ರಾಜೀನಾಮೆ ನೀಡಿದ್ದರು. ಅವರ ನಿರ್ಗಮನದ ಬಳಿಕ ನಡೆದ ಚುನಾವಣೆಯಲ್ಲಿ ರಾಧಾಕೃಷ್ಣನ್ ಹೊಸ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಮತದಾನ ಬಹಿಷ್ಕರಿಸಿದ ಪಕ್ಷಗಳಲ್ಲಿ, ಬಿಆರ್‌ಎಸ್ ರೈತರ ಸಂಕಷ್ಟ ವಿಚಾರವನ್ನು ಉಲ್ಲೇಖಿಸಿ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ. ಬಿಜೆಡಿ ಹಾಗೂ ಅಕಾಲಿ ದಳವೂ ತಮ್ಮದೇ ಕಾರಣಗಳಿಂದ ದೂರ ಉಳಿದವು. ಕೆಲವು ಸ್ವತಂತ್ರ ಸಂಸದರು ಸಹ ಚುನಾವಣೆಗೆ ಹಾಜರಾಗಲಿಲ್ಲ.