ಕೊಪ್ಪಳ: ಜಿಲ್ಲೆಯ ಗಂಗಾವತಿಯ ನರ್ಸಿಂಗ್ ಕಾಲೇಜಿನಲ್ಲಿ ಪಿಸಿ ವಿದ್ಯಾರ್ಥಿನಿಯೊಬ್ಬಳ ಟಿಸಿ ಪಡೆಯುವ ಸಲುವಾಗಿ ತಾಯಿ ತನ್ನ ತಾಳಿ ಮತ್ತು ಕಿವಿಯೋಲೆಯನ್ನು ಅಡವಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಬಿಬಿಸಿ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿನಿಯೊಬ್ಬರಿಗೆ ಶಾಲಾ ಶುಲ್ಕ ಬಾಕಿ ಇದ್ದ ಕಾರಣ ಟಿಸಿ ನೀಡಲು ನಿರಾಕರಿಸಿತ್ತು.
ಇದರಿಂದ ಬೆಸೆತ್ತ ವಿದ್ಯಾರ್ಥಿನಿಯ ತಾಯಿ ತನ್ನ ತಾಳಿ ಮತ್ತು ಕಿವಿಯೋಲೆಯನ್ನು ಶಾಲಾ ಆಡಳಿತ ಮಂಡಳಿಗೆ ಒತ್ತೆ ಇಡುವ ಮೂಲಕ ಮಗಳ ಉತ್ತಮ ಭವಿಷ್ಯಕ್ಕೆ ತೊಂದರೆಯಾಗದಂತೆ ವ್ಯವಹರಿಸಿದ್ದಾರೆ.
ಕಾಲೇಜಿನ ಚೇರ್ಮನ್ ಡಾ. ಸಿ.ಬಿ ಚಿನಿವಾಲ ಎಂಬವರು ಟಿಸಿ ಪಡೆಯಲು ಹಣವಿಲ್ಲದ ಕಾರಣ ವಿದ್ಯಾರ್ಥಿ ತಾಯಿ ರೇಣುಕಮ್ಮ ಬಳಿ ಇದ್ದ ತಾಳಿ, ಕಿವಿ ಓಲೆಗಳನ್ನು ಒತ್ತೆಯಾಗಿಸಿಕೊಂಡವರು. ನಂತರ ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಆಭರಣಗಳನ್ನು ಮರಳಿ ನೀಡಿದ್ದಾರೆ ಎಂದು ತಿಳಿದುಬಂದಿದೆ.