ಮಂಡ್ಯ: "ಮಿಸ್ಟರ್ ಮಂಜುನಾಥ್, ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ – ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸುವುದು ನಿಯಮಬಾಹಿರ. ನಾಳೆ ಬೆಳಿಗ್ಗೆ ನೀವು ಸ್ವಯಂ ಪ್ರೇರಿತ (suo motu) ಪ್ರಕರಣ ದಾಖಲಿಸಿ. ಮದ್ದೂರು ಜ್ಯೂರಿಡಿಕ್ಷನ್‌ನಲ್ಲಿ ಯಾರಾದರೂ ಬೆಳಿಗ್ಗೆ 5 ಗಂಟೆ ಇತ್ತಿಚೆಗೆ ಘೋಷಣೆಗಳ ಮೂಲಕ ಅಥವಾ ಧ್ವನಿವರ್ಧಕ ಉಪಯೋಗಿಸಿ ಇತರರ ನಿದ್ದೆಗೆ ಅಡಚಣೆ ಉಂಟುಮಾಡುತ್ತಿದ್ದಾರೆ ಎಂದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ. ನಾನು ಕಾನೂನಿಗೆ ಬದ್ಧ ವ್ಯಕ್ತಿ ಎಂಬುದನ್ನು ತೋರಿಸಿ. ಖಾಕಿ ಬಟ್ಟೆಯ ನಿಯತ್ತು ತೋರಿಸಿ. ನನ್ನ ಮೇಲೆ ಕೇಸ್ ಹಾಕುವುದರ ಮೂಲಕ ನೀವು ನಿಮ್ಮ ಕರ್ತವ್ಯ ತೋರಿಸಬಾರದು. ನಾನು ಕೇಸ್‌ಗೆ ಹೆದರುವ ವ್ಯಕ್ತಿಯಲ್ಲ!" ಎಂದು ಬಿಜೆಪಿ ನಾಯಕ ಸಿ ಟಿ ರವಿ ಮದ್ದೂರಿನಲ್ಲಿ ನಡೆದ ಗಣೇಶೋತ್ಸವ ಸಂದರ್ಭದಲ್ಲಿ ಆಡಳಿತ ಕಾಂಗ್ರೆಸ್ ಮತ್ತು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
"ಮಂಡ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಂದ್ ಸ್ವಯಂ ಪ್ರೇರಿತವಾಗಿ ನಡೆಯಿತು"
"ಸಿಟಿ ರವಿಯವರು ಯಾವುದೇ ಉದ್ರೇಕಕಾರಿ ಭಾಷಣ ಮಾಡಿಲ್ಲ. ಅವರು 'ಪಾಕಿಸ್ತಾನ್ ಜಿಂದಾಬಾದ್' ಎಂದರಾ? ಅವರು ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದರಾ? ಇಲ್ಲ! ಆದರೆ ಕಾಂಗ್ರೆಸ್ ಸರ್ಕಾರ, ವಿರೋಧ ಪಕ್ಷದ ಧ್ವನಿಯನ್ನು ದಬ್ಬಿಸಲು, ಅವರ ಮೇಲೂ ಇತರರ ಮೇಲೂ ಕೇಸು ಹಾಕುವ ಕೆಲಸವನ್ನು ಮಾಡುತ್ತಿದೆ" ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
"ಇದೇ ತಿರುಗಿ ಬಾಣವಾಗಲಿದೆ ಎಂದು ಎಚ್ಚರಿಕೆ"
"ಈ ರೀತಿಯ ರಾಜಕೀಯ ದಬ್ಬಾಳಿಕೆಗೆ ನೀವು ಎಡಪಡುವಿರಿ. ಇದು ತಿರುಗಿ ಬಾಣವಾಗಿ ನಿಮ್ಮ ಮೆಲೆ ಬಡಿಯಲಿದೆ" ಎಂಬ ಎಚ್ಚರಿಕೆಯನ್ನು ಅವರು ಸರ್ಕಾರಕ್ಕೆ ನೀಡಿದರು ಎಂದು ಆರ್ ಅಶೋಕ್ ಎಚ್ಚರ ನೀಡಿದರು.