ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹೂತು ಹಾಕಿದ್ದ ಪ್ರಕರಣಗಳಿಗೆ ಸಂಬಂಧಪಟ್ಟಂತೆ, ಈ ಹಿಂದೆ ಹಲವಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಿಸಿದ ವ್ಯಕ್ತಿ ಚಿನ್ನಯ್ಯ, ಎರಡು ವರ್ಷಗಳ ಹಿಂದೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಭೇಟಿಯಾಗಿರುವ ವಿಚಾರವನ್ನು ಅವರು ಸ್ಥಳೀಯ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅವರ ಹೇಳಿಕೆಯ ಪ್ರಕಾರ, ಎರಡು ವರ್ಷಗಳ ಹಿಂದೆ ಅಂದರೆ 2023ರ ಸೆಪ್ಟೆಂಬರ್ 10ರಂದು, ಯಾರೋ ಒಬ್ಬ ಅನಾಮಿಕ ವ್ಯಕ್ತಿ ಭೇಟಿಯಾಗಿ, ಧರ್ಮಸ್ಥಳ ಪರಿಸರದಲ್ಲಿ ಹೂತಿದ್ದ ಶವಗಳ ಬಗ್ಗೆ ತಾನು ಅನುಭವಿಸುತ್ತಿದ್ದ ದುಃಖ, ದುಮ್ಮನವನ್ನು ಹಂಚಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.
“ಧರ್ಮಸ್ಥಳದಲ್ಲಿ ಏನೇನು ನಡೆದಿದೆ, ಎಷ್ಟೆಷ್ಟು ಅ*ತ್ಯಾಚಾರ, ಕೊ*ಲೆಗಳಾಗಿವೆ. ಎಷ್ಟೆಷ್ಟು ಮಂದಿಯನ್ನು ಹೊಡೆದು ಸಾ*ಯಿಸಿದ್ದೇವೆ, ನಮ್ಮ ಎದುರು ಎಷ್ಟೋ ಜನ ಸಾ*ಯಿಸಿದ್ದಾರೆ. ಯಾವ ಯಾವ ರೀತಿಯಲ್ಲಿ ನಾವು ಹೆಣಗಳನ್ನು ಹೂತು ಹಾಕಿದ್ದೇವೆ. ಯಾವ ಯಾವ ರೀತಿಯಲ್ಲಿ ಭಿಕ್ಷುಕರನ್ನು ಹೊಡೆದು ಕೊಂ*ದಿದ್ದೇವೆ. ಇಡೀ ಜಗತ್ತನ್ನೇ ಬೆಚ್ಚಿಬೀಳಿಸುವಂತಹ ಸತ್ಯವನ್ನು ಬಿಚ್ಚಿಟ್ಟಿದ್ದಾನೆ” ಎಂದು ಅವರು ವಿವರಿಸಿದ್ದಾರೆ.
ಆತ, ಆತನ ಹೆಂಡತಿ ಮತ್ತು ಅಕ್ಕ ನಮ್ಮ ಬಳಿಗೆ ಬಂದು, “ನಮಗೂ ಅನ್ಯಾಯವಾಗಿದೆ. ನನ್ನ ಮನೆಯ ಹೆಣ್ಣುಮಗಳನ್ನು ಕೂಡ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ” ಎಂಬ ಅಳಲನ್ನು ತೋಡಿಕೊಂಡು, ಸರಿಸುಮಾರು ಒಂದೂವರೆ ಗಂಟೆಗಳ ವಿಡಿಯೋ ರೆಕಾರ್ಡ್ ಮಾಡಿಸಿಕೊಂಡಿದ್ದಾನೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಹೇಳಿಕೆಗಳು ಸಂದರ್ಶನದ ಭಾಗವಾಗಿದ್ದು, ಅಧಿಕೃತ ದೃಢೀಕರಣ ಇನ್ನಷ್ಟೇ ಬರಬೇಕಿದೆ.