ಹಾಸನ: ನಿನ್ನೆ ರಾತ್ರಿ ಹಾಸನದ ಮೊಸಳೆಹೊಸಳ್ಳಿ ಗ್ರಾಮದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 17 ಜನರಿಗೆ ಗಾಯಗಳಾಗಿದ್ದವು. ಅವರಲ್ಲಿ 7 ಜನರ ಪರಿಸ್ಥಿತಿ ಗಂಭೀರವಾಗಿತ್ತು.
ಆದರೆ ಇದೀಗ, 26 ವರ್ಷದ ಶಿವಯ್ಯ ಕೊಪ್ಪಲು ಗ್ರಾಮದ ಚಂದನ್ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದರೊಂದಿಗೆ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಗಣೇಶ ಮೆರವಣಿಗೆಯ ವೇಳೆ ಹಾಸನದಿಂದ ಹೊಳೆನರಸೀಪುರದ ಕಡೆಗೆ ಸಾಗುತ್ತಿದ್ದ ಕಂಟೇನರ್ ಲಾರಿ, ಬೈಕ್‌ಗೆ ಡಿಕ್ಕಿ ತಪ್ಪಿಸಲು ಪ್ರಯತ್ನಿಸುವಾಗ ಮೆರವಣಿಗೆಯಲ್ಲಿ ನಡೆದಾಡುತ್ತಿದ್ದವರ ಮೇಲೆ ಹರಿದು ಹೋದ ಪರಿಣಾಮ ಈ ದುರಂತ ಸಂಭವಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ದುಃಖ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ಪರಿಹಾರಧನವನ್ನು ಘೋಷಿಸಿದ್ದಾರೆ.