16 September 2025 | Join group

ಸೆಪ್ಟೆಂಬರ್ 15: ಹವಾಮಾನ ವರದಿ - ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಸಾಮಾನ್ಯ ಮಳೆ ಆರಂಭ

  • 15 Sep 2025 01:00:00 PM

ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್

 

ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ನಿನ್ನೆ ಮತ್ತು ಇವತ್ತು ಮುಂಜಾನೆ ಸಣ್ಣ ಮಳೆಯಾಗಿತ್ತು. ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗಿದ್ದು ಬಾಗಲಕೋಟೆ ಕಲ್ಬುರ್ಗಿ ಯಾದಗಿರಿ ರಾಯಚೂರು ಜಿಲ್ಲೆಗಳ ಅಲ್ಲಲ್ಲಿ ಭಾರಿ ಮಳೆಯಾಗಿದೆ.

 

ಇವತ್ತಿನ ಮುನ್ಸೂಚನೆ ಪ್ರಕಾರ ಮಧ್ಯಭಾರತದ ಲೋ ಪ್ರೆಷರ್ ಕಾರಣದಿಂದ ಇವತ್ತಿನಿಂದ ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಸಾಮಾನ್ಯ ಮಳೆ ಆರಂಭವಾಗಲಿದೆ. ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು -ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಕರಾವಳಿ ತೀರಪ್ರದೇಶಗಳಲ್ಲಿಯೂ ಮಳೆಯಾಗಬಹುದು. ಕರಾವಳಿಯಲ್ಲಿ ಸೆ 21 ತನಕ ಒಂದು ವಾರ ಪ್ರತಿದಿನ ಒಂದೆರಡು ಸಾಮಾನ್ಯ ಮಳೆ ಮುಂದುವರೆಯಬಹುದು.

 

ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಇವತ್ತಿನಿಂದ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆ ಆರಂಭವಾಗಬಹುದು. ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಒಂದೆರಡು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

 

ದಕ್ಷಿಣ ಒಳನಾಡಿನ ಅಲ್ಲಲ್ಲಿ ಸಂಜೆ ಮಳೆ ಮುನ್ಸೂಚನೆ ಇದೆ. ಮೈಸೂರು ಮಂಡ್ಯ ಬೆಂಗಳೂರು - ಗ್ರಾಮಾಂತರ ತುಮಕೂರು ದಾವಣಗೆರೆ ಚಿತ್ರದುರ್ಗ ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.ಸೆ, 18 ರಿಂದ ಮಳೆ ಕಡಿಮೆ ಆಗಬಹುದು.

 

ಉತ್ತರ ಒಳನಾಡಿನ ಬಿಜಾಪುರ ಬೀದರ್ ಕಲ್ಬುರ್ಗಿ ಯಾದಗಿರಿ ರಾಯಚೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಬೆಳಗಾವಿ ಧಾರವಾಡ ಗದಗ ಬಾಗಲಕೋಟೆ ಹಾವೇರಿ ಕೊಪ್ಪಳ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆ ಮುನ್ಸೂಚನೆ ಇದೆ.

 

ಮಧ್ಯಭಾರತದಲ್ಲಿರುವ ಲೋ ಪ್ರೆಷರ್ ಪ್ರಭಾವದಿಂದ ಮಹಾರಾಷ್ಟ್ರ ಮಧ್ಯಪ್ರದೇಶಗಳಲ್ಲಿ ಅಧಿಕ ಮಳೆಯಾಗಲಿದ್ದು ಭಾರತದ ಪಶ್ಚಿಮ ಕರಾವಳಿ ಜಿಲ್ಲೆಗಳಲ್ಲಿ ಒಂದು ವಾರ ಸಾಮಾನ್ಯ ಮಳೆ ಮುಂದುವರೆಯಲಿದೆ. ರಾಜಸ್ಥಾನದಿಂದ ಮುಂಗಾರು ಹಿಂದೆ ಬರಲು ಆರಂಭವಾಗಿದೆ.