24 October 2025 | Join group

ರಾಜ್ಯದ ಕಾವೇರಿ ಸೇರಿದಂತೆ 12 ನದಿಗಳು ಕುಡಿಯಲು ಯೋಗ್ಯವಲ್ಲ : KSPCB ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗ

  • 23 Oct 2025 08:54:05 PM

ಬೆಂಗಳೂರು : ರಾಜ್ಯದ 12 ನದಿಗಳ ನೀರು ಕುಡಿಯುವುದಕ್ಕೆ ಅನ್ಸೆಫ್ ಆಗಿದ್ದು, ಜೀವನದಿ ಕಾವೇರಿ ಸೇರಿದಂತೆ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಅಂತ ವರದಿ ಬಹಿರಂಗವಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ವರದಿ 12 ನದಿಗಳ ನೀರು ಕುಡಿಯೋದಕ್ಕೆ ಯೋಗ್ಯವಲ್ಲ ಎಂದು ವರದಿ ಬಹಿರಂಗಪಡಿಸಿದೆ.

 

ಹೌದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 12 ನದಿಗಳ ನೀರನ್ನು 32 ಕಡೆ ಪರಿಶೀಲನೆ ಮಾಡಿತ್ತು. ಪರೀಕ್ಷೆಗೆ ಒಳಪಟ್ಟ ಒಂದು ನದಿಗೂ ಕೂಡ A ಗ್ರೇಡ್ ಸಿಕ್ಕಿಲ್ಲ. ಕಳೆದ ಸೆಪ್ಟೆಂಬರ್ ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಈ ಒಂದು ಆಘಾತಕಾರಿ ಅಂಶ ಇದೀಗ ಬಯಲಾಗಿದೆ. 12 ನದಿಗಳ ನೀರಲ್ಲಿ ಆಮ್ಲಜನಕದ ಕೊರತೆ ಇರುವುದು ಪತ್ತೆಯಾಗಿದೆ. ಜೀವನದಿ ಕಾವೇರಿ ಸೇರಿದಂತೆ 12 ನದಿಗಳ ನೀರು ಕಲುಷಿತವಾಗಿದ್ದು ಕುಡಿಯುವುದಕ್ಕೆ ಯೋಗ್ಯವಲ್ಲ ಅಂತ ವರದಿಯಲ್ಲಿ ಬಹಿರಂಗಗೊಂಡಿದೆ.