ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 25 ರಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಉನ್ನತ ನಾಯಕರ ಸಮ್ಮುಖದಲ್ಲಿ ಅಯೋಧ್ಯೆಯ ರಾಮ ಮಂದಿರದ ಮೇಲೆ ಧ್ವಜ ಸ್ಥಾಪನೆ ಮಾಡಲಿದ್ದಾರೆ.
ಭವ್ಯ ಪ್ರಾಣ ಪ್ರತಿಷ್ಠೆಯನ್ನು ನೆನಪಿಸುವ ಈ ಸಮಾರಂಭವು ಪಕ್ಷದ ಹೊಸ ಅಭಿಯಾನದ ಆರಂಭವನ್ನು ಸಹ ಸೂಚಿಸುತ್ತದೆ.
ಕಾರ್ಯಕ್ರಮದಲ್ಲಿ 35,000 ಕ್ಕೂ ಹೆಚ್ಚು ಸ್ಕೌಟ್ ಮತ್ತು ಗೈಡ್ ಕೆಡೆಟ್ ಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ವೇಳೆ ಪ್ರಧಾನಿಯವರು ವಿಕ್ಷಿತ್ ಉತ್ತರ ಪ್ರದೇಶ ಅಭಿಯಾನದ ಯಶಸ್ಸನ್ನು ಪರಿಶೀಲಿಸಲಿದ್ದಾರೆ ಮತ್ತು ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ಕೂಡಾ ಪರಿಶೀಲಿಸಲಿದ್ದಾರೆ ಎಂದು ತಿಳಿದುಬಂದಿದೆ.





