ನವದೆಹಲಿ: ಚುನಾವಣಾ ಆಯೋಗವು ಇಂದು ಸೋಮವಾರ ಸಂಜೆ ಪ್ಯಾನ್-ಇಂಡಿಯಾ ವಿಶೇಷ ತೀವ್ರ ಪರಿಷ್ಕರಣೆ ಮತದಾರರ ಪಟ್ಟಿಯ ಘೋಷಣೆಗಾಗಿ ಪತ್ರಿಕಾಗೋಷ್ಠಿ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಚುನಾವಣಾ ಆಯೋಗವು ಪ್ಯಾನ್-ಇಂಡಿಯಾ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅನಾವರಣಗೊಳಿಸಲಿದೆ. ಮೊದಲ ಹಂತದಲ್ಲಿ 10-15 ರಾಜ್ಯಗಳಲ್ಲಿ ನಡೆಯುವ ಸಾಧ್ಯತೆ ಇದೆ.
ಚುನಾವಣಾ ಪ್ರಾಧಿಕಾರವು 2026 ರಲ್ಲಿ ವಿಧಾನಸಭಾ ಚುನಾವಣೆಗೆ ಹೋಗುವ ರಾಜ್ಯಗಳು ಸೇರಿದಂತೆ 10 ರಿಂದ 15 ರಾಜ್ಯಗಳನ್ನು ಒಳಗೊಳ್ಳುವ SIR (Special Intensive Revision) ನ ಮೊದಲ ಹಂತವನ್ನು ಘೋಷಿಸುವ ಸಾಧ್ಯತೆಯಿದೆ.
ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಗಳಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. “ಭಾರತೀಯ ಚುನಾವಣಾ ಆಯೋಗವು ನಾಳೆ, ಅಕ್ಟೋಬರ್ 27, 2025 ರಂದು ಸಂಜೆ 4:15 ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದೆ” ಎಂದು ಮಾಧ್ಯಮ ಆಹ್ವಾನದಲ್ಲಿ ತಿಳಿಸಲಾಗಿದೆ.




