03 November 2025 | Join group

ಬಿಹಾರ ಚುನಾವಣೆ ಪ್ರಚಾರದ ವೇಳೆ ಕೆರೆಯಲ್ಲಿ ಮೀನು ಹಿಡಿದ ರಾಹುಲ್ ಗಾಂಧಿ

  • 02 Nov 2025 03:36:55 PM

ಪಾಟ್ನಾ: ಲೋಕಸಭಾ ಸದಸ್ಯ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಹಾರದ ಬೇಗುಸರೈನಲ್ಲಿ ಕೆರೆಗೆ ಹಾರಿ ಸಾಂಪ್ರದಾಯಿಕ ಮೀನು ಹಿಡಿಯುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

 

ಭಾನುವಾರ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ನಂತರ ಪ್ರಚಾರದ ಸಮಯದಲ್ಲಿ ಸ್ಥಳೀಯ ಮೀನುಗಾರರನ್ನು ಭೇಟಿಯಾದರು.

 

ಪ್ರಚಾರಕ್ಕೆ ತೆರಳುವಾಗ ಮೀನುಗಾರರ ಜತೆಗೆ ದೋಣಿಯಲ್ಲಿ ಕೆರೆಯ ಮಧ್ಯ ಭಾಗಕ್ಕೆ ತೆರಳಿ ರಾಹುಲ್ ಗಾಂಧಿ ಕೆರೆಗೆ ಹಾರಿದರು. ಅಲ್ಲಿ ಅವರು ಸಾಂಪ್ರದಾಯಿಕ ಮೀನುಗಾರಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.