ಹಿಂದೂ ಶಾಸ್ತ್ರದ ಪ್ರಕಾರ ಬಾಗಿಲಿನ ಹೊಸ್ತಿಲಿನ ಮೇಲೆ ಯಾಕೆ ಕುಳಿತುಕೊಳ್ಳಬಾರದು ?

  • 29 Mar 2025 02:08:21 PM

ಹಿಂದಿನ ಕಾಲದ ಪ್ರತಿಯೊಂದು ನಿಯಮಗಳ ಹಿಂದೆ ಬಲವಾದ ಕಾರಣಗಳು ಇದ್ದೆ ಇರುತ್ತದೆ. ಆ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಬೇಕಾಗಿ ಪೋಷಕರು ಅಥವಾ ಮನೆಯ ಹಿರಿಯರು ಮಾರ್ಗದರ್ಶನ ನೀಡುತ್ತಿದ್ದರು. ಅದನ್ನು ಸರಿಯಾಗಿ ಪಾಲಿಸದೇ ಇದ್ದರೆ ಬುದ್ದಿ ಹೇಳಿ ಸರಿಪಡಿಸುತ್ತಿದ್ದರು.

 

ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು ಎನ್ನುವುದು ಕೂಡ ನಮ್ಮ ಪೂರ್ವಜರ ನಿಯಮವಾಗಿತ್ತು. ಆದ್ದರಿಂದ,  ಮಕ್ಕಳನ್ನು ಬಾಗಲಿನ ಬಾಗಿಲಿನ ಹೊಸ್ತಿಲಿನ ಮೇಲೆ ಕೂಡಿಸುತ್ತಿರಲಿಲ್ಲ. ಸ್ವಲ್ಪ ದೊಡ್ಡ ಮಕ್ಕಳು ಹೊಸಲಿನ ಮೇಲೆ ಕುಳಿತುಕೊಂಡರೆ, ಅವರನ್ನು ಬೈದು ಕೆಳಗೆ ಇಳಿಸುತ್ತಿದ್ದರು.

 

ಆಧುನಿಕ ಯುಗಕ್ಕೆ ಹೆಜ್ಜೆ ಇಡುತ್ತಿದ್ದಂತೆ ಇದನ್ನು ಮೂಢನಂಬಿಕೆಯೆಂದು ಕೆಲಕಾಲ ತಿಳಿದಿದ್ದರು. ಡ್ರೌಸಿಂಗ್ ರಾಡ್ ನ್ನು ಕಂಡು ಹಿಡಿದ ನಂತರ ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು ಎನ್ನುವುದರಲ್ಲಿ ಶಾಸ್ತ್ರೀಯ ಅಂಶವಿದೆಯೆಂದು ತಿಳಿದು ಬಂತು.

 

ಡ್ರೌಸಿಂಗ್ ರಾಡ್ ಎನ್ನುವ ಪರಿಕರವನ್ನು ಬಾಗಲಿನ ಚೌಕಟ್ಟಿನ ಹತ್ತಿರ ಇಟ್ಟರೆ, ಅಲ್ಲಿ ಪ್ರತಿಕೂಲ ಶಕ್ತಿಯು ನಾಲ್ಕು ದಿಕ್ಕುಗಳಿಗೂ ಪ್ರಸರಿಸುವುದನ್ನು ನಾವು ಗಮನಿಸಬಹುದು. ಆದ್ದರಿಂದ ಜ್ಞಾನವಂತರಾದ ನಮ್ಮ ಪೂರ್ವಿಕರಿಗೆ ಈ ವಿಷಯ ಮೊದಲೇ ಗೊತ್ತಿತ್ತು.

 

ಆದ್ದರಿಂದ ಇಂತಹ ನಿಷೇಧವನ್ನು ಇಟ್ಟಿದ್ದರು. ಆದ್ದರಿಂದ ಬಾಗಿಲಿನ ಚೌಕಟ್ಟಿನ ಹತ್ತಿರ ಯಾವುದೇ ಕೆಲಸಗಳಿಗೆ ಅವಕಾಶವಿಲ್ಲ. ಈ ರೀತಿಯ ನಿಷೇದಕ್ಕೆ ಬಾಗಿಲಿನ ಚೌಕಟ್ಟಿನ ಹತ್ತಿರ ಪ್ರತಿಕೂಲಕರವಾದ ಶಕ್ತಿ ಪ್ರಸಾರ ಆಗುವುದರಿಂದಲೇ ಈ ನಿಷೇಧದ ಹಿಂದಿನ ರಹಸ್ಯ.

 

ಹೀಗೆ ಬಾಗಿಲ ಚೌಕಟ್ಟಿನಿಂದ ಪ್ರತಿಕೂಲ ಶಕ್ತಿ ತರಂಗಗಳು ಪ್ರಸಾರವಾಗುವುದರ ಕಾರಣ ಚೌಕಟ್ಟು ಚತುರಸ್ರಾಕಾರದಲ್ಲಿ ಇರುವುದರಿಂದಲೇ ಬಹುಶಃ ಇದನ್ನು ಗಮನಿಸಿಯೇ ಚೀನಾದವರು ಕಿಟಕಿ ಮತ್ತು ಬಾಗಿಲುಗಳ ಮೇಲ್ಭಾಗವನ್ನು ಆರ್ಚ್ ರೀತಿಯಲ್ಲಿ ನಿರ್ಮಿಸಿರುವರು.

 

ನಮ್ಮ ದೇವಾಲಯಗಳು ಮತ್ತು ಚರ್ಚುಗಳು ಸಹ ಬಾಗಿಲುಗಳ ಮೇಲ್ಭಾಗದಲ್ಲಿ ಆರ್ಚ್ ರೀತಿಯಲ್ಲಿ ನಿರ್ಮಿಸಲ್ಪಟ್ಟಿವೆ.

 

ಆದ್ದರಿಂದ ಯಾವುದೇ ಕಾರಣಕ್ಕೆ ಮನೆಯ ಹೊಸ್ತಿಲಲ್ಲಿ ಕುಳಿತುಕೊಳ್ಳುವುದಾಗಲಿ ಅಥವಾ ಯಾವುದೇ ವಸ್ತುಗಳನ್ನು ಇಡುವುದಾಗಲಿ ಮಾಡದೇ ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳುವುದು ತುಂಬಾ ಉತ್ತಮ.