ಚಿತ್ರ: X/@Indo__Aryan
ಶ್ರೀಮದ್ ಭಗವದ್ಗೀತೆ ಮತ್ತು ಭರತ ಮುನಿಯ ನಾಟ್ಯಶಾಸ್ತ್ರವನ್ನು ಯುನೆಸ್ಕೋ(UNESCO's)ದ ವಿಶ್ವ ದಾಖಲೆಯ ಸ್ಮರಿಣಿಕೆಯಲ್ಲಿ ಕೆತ್ತಲಾಗಿದೆ. ಪ್ರಧಾನಿ ಮೋದಿಯವರು ಇದೊಂದು 'ಹೆಮ್ಮೆಯ ಕ್ಷಣ' ಎಂದು ಹೇಳುತ್ತಾ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಯುನೆಸ್ಕೋ(UNESCO's) ಹೇಳಿರುವ ಪ್ರಕಾರ, ಒಟ್ಟು 74 ಹೊಸ ನೋಂದಣಿಯನ್ನು ವಿಶ್ವ ನೋಂದಣಿಯ ಸ್ಮರಣೆ(Memory of the World Register) ಗೆ ಸೇರಿಸಲಾಗಿದ್ದು, ಒಟ್ಟು ಸದ್ಯದ ಸಂಗ್ರಹಣೆ 570ಕ್ಕೆ ಏರಿದೆ ಎಂದು ತಿಳಿಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪ್ರಧಾನಿ ಮೋದಿ, ಎರಡೂ ಧರ್ಮಗ್ರಂಥಗಳ ಸೇರ್ಪಡೆಯು "ಪ್ರಪಂಚದಾದ್ಯಂತ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ! ಯುನೆಸ್ಕೋದ ವಿಶ್ವ ಸ್ಮರಣೆಯಲ್ಲಿ ಗೀತೆ ಮತ್ತು ನಾಟ್ಯಶಾಸ್ತ್ರದ ಸೇರ್ಪಡೆಯು ನಮ್ಮ ಕಾಲಾತೀತ ಬುದ್ಧಿವಂತಿಕೆ ಮತ್ತು ಶ್ರೀಮಂತ ಸಂಸ್ಕೃತಿಯ ಜಾಗತಿಕ ಮನ್ನಣೆಯಾಗಿದೆ. ಗೀತಾ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆ ಮತ್ತು ಪ್ರಜ್ಞೆಯನ್ನು ಪೋಷಿಸಿವೆ. ಅವರ ಒಳನೋಟಗಳು ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ" ಎಂದು ಪ್ರಧಾನಿ ಮೋದಿ ಹೇಳಿದರು.