ತಿರುಪತಿ: ಬಂಟ್ವಾಳ ತಾಲೂಕು ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ರಾಜ್ಯದ ಬಿಜೆಪಿ ಮಾಜಿ ಅಧ್ಯಕ್ಷರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದರು ಶ್ರೀ ನಳಿನ್ ಕುಮಾರ್ ಕಟೀಲ್ ಮತ್ತು ಖ್ಯಾತ ಸಂಗೀತ ನಿರ್ದೇಶಕರು ಗುರುಕಿರಣ್ ಹಾಗೂ ಸಂಗಡಿಗರು ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ಕೊಟ್ಟು ತಿಮ್ಮಪ್ಪನ ಆಶೀರ್ವಾದ ಪಡೆದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕ್ಯಾಮೆರಾಗಳಿಂದ ಕ್ಲಿಕಿಸಿದ ಫೋಟೋವೊಂದನ್ನು ಹಂಚುವುದರ ಮೂಲಕ ' ಮಿತ್ರರೊಡನೆ ಶ್ರೀ ಕ್ಷೇತ್ರ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು' ಎಂದು ಬರೆದಿರುತ್ತಾರೆ.
ಬಂಟ್ವಾಳ ಕ್ಷೇತ್ರದ ಜನರ ಅಭಿವೃದ್ದಿಗಾಗಿ ಶ್ರೀ ವೆಂಕಟೇಶ್ವರ ಮತ್ತು ಪದ್ಮಾವತಿ ಅಮ್ಮನವರಲ್ಲಿ ಪ್ರಾರ್ಥಿಸಿ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.