ಬ್ರಹ್ಮ ಮುಹೂರ್ತದ ಬಗ್ಗೆ ನಾವು ಕೇಳುತ್ತಲೇ ಇರುತ್ತೇವೆ. ವಿದ್ವಾಂಸಕರು ಅಥವಾ ಶಾಲಾ ಶಿಕ್ಷಕರು ಈ ಮುಹೂರ್ತದ ಬಗ್ಗೆ ಬಹಳಷ್ಟು ಕಾರ್ಯಕ್ರಮಗಳಲ್ಲಿ ಮಾತನಾಡುತ್ತಿರುತ್ತಾರೆ. ಬ್ರಹ್ಮ ಮುಹೂರ್ತದಲ್ಲಿ ಎದ್ದು ಓದು ಎಂದು ಪೋಷಕರು ಮಕ್ಕಳನ್ನು ಬಲವಂತ ಮಾಡಿದರೆ ಮಕ್ಕಳು ಹಿರಿಯರ ಮಾತನ್ನು ವಿರಳವಾಗಿ ಪಾಲಿಸುವರು.
ಯಾವಾಗ ಬ್ರಹ್ಮ ಮುಹೂರ್ತದ ಸಮಯ
ಸೂರ್ಯೋದಯಕ್ಕೆ ಮುಂಚೆ ನಲ್ವತ್ತೆಂಟು ನಿಮಿಷಗಳನ್ನು ಬ್ರಹ್ಮ ಮುಹೂರ್ತ ಎನ್ನುವರು. ಈ ಶುಭ ಕಾಲಕ್ಕೆ ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ಪತಿಯ ಹೆಸರನ್ನು ಇಡಲಾಗಿದೆ. ಈ ಸಮಯವನ್ನು ಸರಸ್ವತಿ ಜಾವವೆಂದೂ ಕರೆಯಲಾಗುತ್ತದೆ.
ಈ ಮುಹೂರ್ತದಲ್ಲಿ ವಿದ್ಯಾರ್ಥಿಗಳು ಓದಿದರೆ ಒಳ್ಳೆಯದೇ ?
ಈ ಮುಹೂರ್ತದಲ್ಲಿ ವಿದ್ಯಾರ್ಥಿಗಳು ಓದಿದರೆ ತುಂಬಾ ಒಳ್ಳೆಯದು. ಇದರಲ್ಲಿ ವಾಸ್ತವವೇನೆಂದರೆ, ಈ ಸಮಯದಲ್ಲಿ ಮಾಡಿದ ವಿದ್ಯಾಭ್ಯಾಸವು ಚೆನ್ನಾಗಿ ನೆನಪಿನಲ್ಲಿರುತ್ತದೆ. ಒಂದು ಪರಿಶೋಧನಾ ಸಂಸ್ಥೆ ವಿದ್ಯಾಭ್ಯಾಸದಲ್ಲಿ ಹಿಂದುಳಿದವರ ಮೇಲೆ ಅಧ್ಯಯನ ನಡೆಸಿ ಅಂತಹ ವಿದ್ಯಾರ್ಥಿಗಳು ಬ್ರಹ್ಮ ಮುಹೂರ್ತದಲ್ಲಿ ಓದಿದರೆ ಉನ್ನತ ಫಲ ಇರುತ್ತದೆಂದು ನಿರ್ಧರಿಸಿದ್ದಾರೆ.
ಸೂರ್ಯೋದಯದ ನಲ್ವತ್ತೆಂಟು ನಿಮಿಷಗಳ ಮುಂಚೆ ಬ್ರಾಹ್ಮಿ ಮುಹೂರ್ತ ಪ್ರಾರಂಭವಾಗುತ್ತದೆ. . ಕಲಾಭ್ಯಾಸವೂ ಸಹ ಈ ಸಮಯದಲ್ಲಿ ಪ್ರಾರಂಭ ಮಾಡಬೇಕೆಂದು ಹೇಳಲಾಗಿದೆ. ತಲೆಯಲ್ಲಿ ಬಲಗಡೆಯಿರುವ ನಿಗಧಿತ ಗ್ರಂಥಿಯೊಂದು ಜಾಗ್ರತಾವಸ್ಥೆಯಲ್ಲಿ ಇರುವಾಗ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಎಳ್ಳೆಣ್ಣೆ ಅಥವಾ ಹಸು ತುಪ್ಪದ ದೀಪ ಬೆಳಗಿಸಿ, ಆ ದಿನದ ಕೆಲಸವನ್ನು ಪ್ರಾರಂಭಿಸಿದರೆ ಬಹಳ ಶುಭಕರವಾಗಿರುತ್ತದೆ.
ಈ ರೀತಿ ಮಾಡುವುದರಿಂದ ದೀಪದಿಂದ ಹೊರಸೂಸುವ ಧನಾತ್ಮಕ ಶಕ್ತಿ ಆ ಪ್ರದೇಶದ ಸುತ್ತಲೂ ವ್ಯಾಪಿಸಿ ಮಾನಸಿಕ ಬಲ ಸಾಮರ್ಥ್ಯಗಳನ್ನು ಮತ್ತು ಬುದ್ಧಿ ಶಕ್ತಿಯನ್ನು ಮೊನಚು ಮಾಡುತ್ತದೆ. ಈ ಕಾರಣದಿಂದಲೇ ಪ್ರಾಚೀನ ಮೇಧಾವಿಗಳು ಮತ್ತು ಈಗಿನ ಪರಿಶೋಧಕರು ವಿದ್ಯೆಯನ್ನು ಕಲಿಯಬೇಕೆನ್ನುವ ಕುತೂಹಲ ಉಳ್ಳವರನ್ನು ಬ್ರಹ್ಮ ಮುಹೂರ್ತದಲ್ಲಿ ಅಭ್ಯಸಿಸುವಂತೆ ಹೇಳಿರುತ್ತಾರೆ.