13 July 2025 | Join group

ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಯಲ್ಲಿ ತನ್ನ ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದ ರಷ್ಯಾದ ಮಹಿಳೆ, ರಕ್ಷಣೆ

  • 12 Jul 2025 03:54:17 PM

ಗೋಕರ್ಣ: ಗೋಕರ್ಣ ದೇವಸ್ಥಾನದ ರಾಮತೀರ್ಥ ಗುಡ್ಡದ ಕಾಡಿನಲ್ಲಿದ್ದ ಗುಹೆವೊಂದರಲ್ಲಿ ಸುಮಾರು 40 ವರ್ಷ ಪ್ರಾಯದ ರಷ್ಯಾದ ಮಹಿಳೆ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಗುಸ್ತು ಪೊಲೀಸರಿಗೆ ದೊರೆತಿತ್ತು. ಆ ಮೂಲಕ ಕಾರ್ಯಾಚರಣೆ ನಡೆಸಿ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿ ಆಶ್ರಮಕ್ಕೆ ಸ್ತಳಾಂತಿಸಿದ್ದಾರೆ.

 

ನೀನಾ ಎನ್ನುವ ಮಹಿಳೆ ಮಕ್ಕಳಾದ ಪ್ರೇಮ(6) ಮತ್ತು ಅಮಾ(4) ಜೊತೆ ಗುಹೆಯಲ್ಲಿ ವಾಸಿಸುತ್ತಿದ್ದರು. ಗುಹೆಯಲ್ಲಿ ಧ್ಯಾನ ಮತ್ತು ಪೂಜೆಯಲ್ಲಿ ತೊಡಗಿಸಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ.

 

2017 ರಲ್ಲಿ ವೀಸಾ ಮುಗಿದಿರುವ ಕಾರಣ ಗೋವಾದಿಂದ ಗೋಕರ್ಣಕ್ಕೆ ಬಂದು ಅಲ್ಲಿಯ ಗುಹೆಯಲ್ಲಿ ನೆಲೆಸಿದ್ದರು. ಇದೀಗ ನೀನಾ ಮತ್ತು ಇಬ್ಬರು ಮಕ್ಕಳನ್ನು ಪೊಲೀಸರು ಕುಮುಟಾದ ಬಂಕಿಕೊಡ್ಲು ಗ್ರಾಮದ ಶಂಕರ ಪ್ರಸಾದ ಫೌಂಡೇಶನ್ ಸರಸ್ವತಿ ಸ್ವಾಮೀಜಿ ಆಶ್ರಮಕ್ಕೆ ಸ್ಥಳಾಂತರಿಸಲಾಯಿತು.