24 July 2025 | Join group

ಖಾಸಗಿ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದರೆ ಸರಕಾರದ ವಶಕ್ಕೆ: ಸಚಿವ ರಾಮಲಿಂಗ ರೆಡ್ಡಿ

  • 14 Jul 2025 10:47:19 AM

ಮಂಗಳೂರು: ರಾಜ್ಯದಲ್ಲಿ ಸರಿ ಸುಮಾರು 2 ಲಕ್ಷ ದೇವಾಲಯಗಳಿವೆ. ಅದರಲ್ಲಿ 35 ಸಾವಿರ ದೇವಾಲಯಗಳು ಮುಜರಾಯಿ ಇಲಾಖೆಯ ಅಡಿಯಲ್ಲಿದೆ. ಉಳಿದ ಒಂದೂವರೆ ಲಕ್ಷ ದೇವಾಲಯಗಳು ಖಾಸಗಿಯವು.  

 

ಒಂದು ವೇಳೆ ಖಾಸಗಿ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದರೆ, ಅಂತಹ ದೇವಸ್ಥಾನಗಳನ್ನು 5 ವರ್ಷಗಳ ಕಾಲ ಸರಕಾರ ವಶಕ್ಕೆ ಪಡೆಯಲು ಅವಕಾಶವಿದೆ ಎಂದು ರಾಜ್ಯ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. 

 

ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅವ್ಯವಹಾರ ನಡೆದಿದೆ ಎನ್ನಲಾದ 8 ದೇವಸ್ಥಾನಗಳನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಅದನ್ನು ವಾಪಾಸ್ ಮಾಡಲಾಗಿತ್ತು ಎಂದರು.

 

ವಶಕ್ಕೆ ಪಡೆದ ಮೇಲೂ ವ್ಯವಹಾರ ಸರಿ ಎಂದಾದರೆ, ಐದು ವರ್ಷದ ನಂತರ ಮರಳಿ ಕೊಡುತ್ತೇವೆ ಎಂದು ಸಚಿವರು ಉಲ್ಲೇಖಿಸಿದರು