ಬಂಟ್ವಾಳ: ದ.ಕ. ಜಿಲ್ಲೆಯ ಪ್ರಸಿದ್ಧ ಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನದಲ್ಲಿ ಈ ಬಾರಿಯ ಆಟಿ ಅಮಾವಾಸ್ಯೆ ಉತ್ಸವವು ಪ್ರತಿ ವರ್ಷದಂತೆ ಬೆಳಿಗ್ಗೆ 3 ಗಂಟೆಯಿಂದ ನಡೆಯಿತು.
ನೂರಾರು ಭಕ್ತರು ತೀರ್ಥಸ್ನಾನದ ಮೂಲಕ ತಮ್ಮ ಶ್ರದ್ಧೆಯನ್ನು ವ್ಯಕ್ತಪಡಿಸಿದ್ದು, ಮೊದಲು ಬಾಗಿನ ಅರ್ಪಿಸಿ, ನಂತರ ತೀರ್ಥಸ್ನಾನದಲ್ಲಿ ಭಾಗವಹಿಸಿದರು. ಈ ಪುಣ್ಯಸ್ನಾನದಿಂದ ಅವರು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂಬ ಭಾವದಿಂದ ಮನಸ್ಸನ್ನು ಶುದ್ಧಪಡಿಸಿಕೊಂಡರು.
ನಾಡಿನ ಶ್ರೇಷ್ಠ ಸಂಘಟನೆಗಳಲ್ಲಿ ಒಂದಾದ ಶಿವಾಜಿ ಬಳಗ (ರಿ) ಮಧ್ವ ಇದರ ಸದಸ್ಯರು ಆಟಿ ಅಮಾವಾಸ್ಯೆಯ ಸುದಿನದಂದು ಶ್ರೀ ಕಾರಿಂಜೇಶ್ವರ ದೇಗುಲದ ಜನ ದಟ್ಟಣೆ ನಿಭಾಯಿಸುವ ಮತ್ತು ಭಕ್ತರಿಗೆ ದೇಗುಲದ ನಿರೂಪವನ್ನು ನಿರೂಪಣೆ ಮಾಡುವ ಶ್ರೇಷ್ಠ ಕಾರ್ಯವನ್ನು ಮಾಡುವ ಮೂಲಕ ದೇಗುಲದ ವ್ಯವಸ್ಥೆಯೊಂದಿಗೆ ಕೈ ಜೋಡಿಸುವ ಸೇವಾ ಕಾರ್ಯವನ್ನು ನಡೆಸಿಕೊಟ್ಟರು.
ಮತ್ತು ಈ ಸಂಘಟನೆ ಪಾಲೆ ಮರದ ಕೆತ್ತೆಯ ಕಷಾಯ ದೇಗುಲಕ್ಕೆ ಬರುವ ಭಕ್ತರಿಗೆ ವಿತರಣೆ ಮಾಡಿ ನಮ್ಮ ತುಳುವ ನಾಡಿನ ಸಂಪ್ರದಾಯ ಉಳಿಸುವ ಸೇವಾ ಕಾರ್ಯವನ್ನು ನಡೆಸಿಕೊಟ್ಟರು.