ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯ ರೂಪಿಸುವುದರ ಬಗ್ಗೆ ಚಾಣಕ್ಯ ಹೇಳಿದ ನೀತಿಯನ್ನು ಓದಿ ತಿಳಿಯಿರಿ

  • 02 Apr 2025 08:05:54 PM

ಚಾಣಕ್ಯ ನೀತಿ ಪೂರ್ವಜರ ಕಾಲದಲ್ಲಿ ಬರೆದರೂ, ಆಧುನಿಕ ಸಮಾಜಕ್ಕೆ ಬಹಳಷ್ಟು ಸಂದೇಶಗಳನ್ನು ನೀಡಿದೆ. ಹಿಂದಿನ ಕಾಲದಲ್ಲಿ ಚಾಣಕ್ಯ ನೀತಿಯಲ್ಲಿ ಯಾವುದನ್ನು ಉಲ್ಲೇಖಿಸಿದ್ದಾರೆಯೋ ಅದನ್ನು ಬಹಳಷ್ಟು ಜನ ಪಾಲಿಸುತ್ತಿದ್ದರು. ಆದ್ದರಿಂದ ಸಮಾಜದಲ್ಲಿ ನ್ಯಾಯ, ಗೌರವ, ಘನತೆ, ಮರ್ಯಾದೆ, ನಿಷ್ಠಾವಂತತೆ ಎಲ್ಲವೂ ಇರುತಿತ್ತು. ಆದರೆ, ಈಗಿನ ಆಧುನಿಕ ಕಾಲದಲ್ಲಿ ಚಾಣಕ್ಯ ನೀತಿ ಅನುಸರಿಸುವುದು ತುಂಬಾ ಉತ್ತಮ. 

 

ಹಾಗಾದರೆ, ಬನ್ನಿ ನೋಡೋಣ ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯ ರೂಪಿಸುವುದರ ಬಗ್ಗೆ ಏನೆಲ್ಲಾ ಉಲ್ಲೇಖಿಸಿದ್ದಾರೆ ಎಂಬುವುದನ್ನು,

 

ತಂದೆ ತಾಯಿಗಳು ಮಕ್ಕಳಿಗೆ ಸರಿಯಾದ ವಿದ್ಯಾ ಬುದ್ಧಿಗಳನ್ನು ಭೋದಿಸಿ ಸನ್ನಡತೆಯಿಂದ ನಡೆಸಿದರೆ ಮಕ್ಕಳು ಹಂಸಗಳ ನಡುವೆ ಕೊಕ್ಕರೆಯಂತೆ ಶೋಭಿಸುತ್ತಾರೆ.

ತಂದೆ ತಾಯಿಗಳು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳ ವಿದ್ಯೆಯೇ ಅವರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರಕಿಸುತ್ತದೆ ಆದ್ದರಿಂದ ಪೋಷಕರು ಮಕ್ಕಳ ವಿದ್ಯೆಗಳಿಗೆ ಮತ್ತು ಅವರ ಬುದ್ದಿಗಳನ್ನು ಸರಿಪಡಿಸಲು ತುಂಬಾ ಪ್ರಯತ್ನ ಪಡಬೇಕು ಎನ್ನುವುದೇ ಈ ನೀತಿಯ ದ್ಯೇಯ.

 

ಮಕ್ಕಳಿಗೆ ಒಳ್ಳೆಯ ನಡತೆ ಮತ್ತು ಒಳ್ಳೆಯ ಜ್ಞಾನವನ್ನು ಕೊಡಬೇಕು. ನೀತಿವಂತ, ಶೀಲಸಂಪನ್ನರಿಗೆ ಮಾತ್ರ ಸಮಾಜ ಮರ್ಯಾದೆಯನ್ನು ನೀಡುತ್ತದೆ.

ಚಾಣಕ್ಯ ನೀತಿ ಹೇಳುವ ಪ್ರಕಾರ, ಒಳ್ಳೆಯ ನಡತೆ ಮತ್ತು ಉತ್ತಮ ಜ್ಞಾನ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮೂಡಿಬರಲು ಸಹಕಾರಿಯಾಗುತ್ತದೆ. ಮತ್ತು ಸಮಾಜ ಅಂತಹ ವ್ಯಕ್ತಿಗೆ ಉತ್ತಮ ಸಮಾಜದದಲ್ಲಿ ಉತ್ತಮ ಮರ್ಯಾದೆ ಕೂಡ ಲಭಿಸಲಿದೆ.


ಮಕ್ಕಳಿಗೆ ಐದನೇ ವರ್ಷದವರೆಗೂ ಮುದ್ದಿಸಬೇಕು, ನಂತರದ ಹತ್ತು ವರ್ಷದಲ್ಲಿ ದಂಡಿಸಿ ಬುದ್ದಿ ಹೇಳಬೇಕು. ಹದಿನಾರನೇ ವಯಸಿನಲ್ಲಿ ಸ್ನೇಹಿತನಂತೆ ಮಾತನಾಡಿಸಬೇಕು.

ಚಾಣಕ್ಯನ ಪ್ರಕಾರ ಮಕ್ಕಳಿಗೆ ಮುದ್ದಿಸುವ, ದಂಡಿಸುವ ಮತ್ತು ಸ್ನೇಹಿತನಂತೆ ಕಾಣುವ ಪ್ರತಿಯೊಂದು ಹೆಜ್ಜೆಗೂ ಅವರ ಪ್ರಾಯದ ಮೇಲೆ ನಿಂತಿರುತ್ತದೆ. ಮಗು ಐದನೇ ವರ್ಷದ ವರೆಗೆ ಬಹಳ ಮುಗ್ದತೆಯಿಂದ ಕೂಡಿದ್ದು ಅದಕ್ಕೆ ಯಾವುದೇ ಅರಿವಿರುವುದಿಲ್ಲ. ಐದು ವರ್ಷದವರೆಗೆ ಮಕ್ಕಳನ್ನು ದೇವರಿಗೆ ಸಮಾನ ಎಂದು ನಂಬುತ್ತಾರೆ. ಆಮೇಲೆ ಪ್ರಾಯಕ್ಕೆ ಅನುಸಾರವಾಗಿ ಬುದ್ದಿ ಹೇಳುವ ಮತ್ತು ಸ್ನೇಹಿತನಂತೆ ಕಾಣುವ ಪ್ರಮೇಯವನ್ನು ಅನುಸರಿಸಬೇಕು ಎಂದು ಹೇಳುತ್ತಾರೆ.

 

ಮಕ್ಕಳು ಚಿಕ್ಕವರಿರುವಾಗಲೇ ಸರಿಯಾದ ರೀತಿಯಲ್ಲಿ ಅವರಿಗೆ ವಿದ್ಯೆ ಬುದ್ದಿಯನ್ನು ಕಲಿಸಿ ಸನ್ಮಾರ್ಗಿಗಳನ್ನಾಗಿ ಮಾಡಬೇಕು. ಅವರ ದಾರಿಗೆ ಅವರನ್ನು ಬಿಟ್ಟರೆ ಮಕ್ಕಳು ಕೆಟ್ಟ ದಾರಿಗಳನ್ನು ಹಿಡಿದು, ಕೆಟ್ಟ ಬುದ್ಧಿಗಳನ್ನು ಕಲಿತು ಹಾಳಾಗುವುದಲ್ಲದೆ, ವಂಶಕ್ಕೆ ಕೆಟ್ಟ ಹೆಸರು ತರುವಂತಹರಾಗುವರು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎನ್ನವ ಗಾದೆ ಮಾತು ಚಾಣಕ್ಯರ ಈ ನೀತಿಗೆ ಅನ್ವಹಿಸುತ್ತದೆ. ಮಕ್ಕಳನ್ನು ಚಿಕ್ಕದಿರುವಾಗಲೇ ಸರಿಯಾದ ರೀತಿಯಲ್ಲಿ ದಾರಿಗೆ ತರಬೇಕಾಗುತ್ತದೆ. ಸರಿಯಾದ ವಿದ್ಯೆ, ಬುದ್ದಿ ಕಳಿಸಿ, ಕೆಟ್ಟ ದಾರಿಗಳನ್ನು ಹಿಡಿಯದಂತೆ ಪೋಷಕರು ಎಚ್ಚರಿಗೆ ವಹಿಸಬೇಕೆಂದು ಚಾಣಕ್ಯ ನೀತಿ ಹೇಳುತ್ತದೆ. 

 

ಚಾಣಕ್ಯ ನೀತಿಯ ಪ್ರಕಾರ, ಮಕ್ಕಳಿಗೆ ಚಿಕ್ಕಂದಿನಿಂದಲೇ ಪ್ರತಿ ಕೆಲಸದಲ್ಲೂ ಶಿಸ್ತು ಎಂಬುದನ್ನೂ ಕಲಿಸಬೇಕು. ಪ್ರತಿ ಕೆಲಸಕ್ಕೂ ಒಂದು ನಿರ್ದಿಷ್ಟ ಸಮಯವನ್ನು ಸ್ವತಃ ರೂಪಿಸಬೇಕು. 

ಹೌದು, ಆಚಾರ್ಯ ಚಾಣಕ್ಯರ ಪ್ರಕಾರ, ಪ್ರತಿ ಕೆಲಸವನ್ನು ಶಿಸ್ತಿನಿಂದ ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಯಾವುದೇ ಕೆಲಸ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಬೇಕು. ಈ ರೀತಿಯಾದ ನಿಯಮ ಮಕ್ಕಳನ್ನು ಯಶಸ್ವಿನತ್ತ ಕೊಂಡೊಯ್ಯುತ್ತದೆ ಮತ್ತು ಮಕ್ಕಳು ಶಿಸ್ತು ಬದ್ಧರಾಗಿರುತ್ತಾರೆ.

 

ಮಕ್ಕಳಿಗೆ ಸ್ವಾವಲಂಬಿಗಳಾಗಿರಲು ಕಲಿಸಿಬೇಕು. ಇದರಿಂದ ಅವರು ಸ್ವತಂತ್ರರಾಗಿರುವರು. ಮಕ್ಕಳು ಯಾವುದೇ ಕಾರ್ಯವನ್ನು ಅವರಾಗಿಯೇ ಮಾಡಬೇಕು. ಇದರಿಂದ ಅವರಿಗೆ ಯಾವುದೇ ಸಮಸ್ಯೆ ಬಂದಾಗ ಸ್ವಯಂ ಆಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದು ಎಂದು ಚಾಣಕ್ಯ ಹೇಳುವರು.

ಮಕ್ಕಳನ್ನು ಸ್ವಾವಲಂಬಿಗಳಾಗಿಸೋದು ಪೋಷಕರ ದೊಡ್ಡ ಕರ್ತವ್ಯ. ತನ್ನ ಕೆಲಸ ತಾನೇ ಮಾಡಿಕೊಳ್ಳುವಷ್ಟು ಶಕ್ತರಾಗನ್ನಾಗಿ ಮಾಡಬೇಕು ಪೋಷಕರು. ಇದರಿಂದ ಮಕ್ಕಳು ಬಲಿಷ್ಠರಾಗಿ ಯಾವುದೇ ಕಷ್ಟದ ಪರಿಸ್ಥಿತಿ ಬಂದರೂ ಗಟ್ಟಿಯಾಗಿ ನಿಲ್ಲುವ ಶಕ್ತಿ ಮಕ್ಕಳದಾಗುತ್ತದೆ. 

 

ಪೋಷಕರು ತಮ್ಮ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಸರಿಯಾಗಿ ಕಲಿಸಿಕೊಡಬೇಕು. ಸತ್ಯ, ಸುಳ್ಳು, ಸರಿ, ತಪ್ಪು ಮತ್ತು ನ್ಯಾಯ ಮತ್ತು ಅನ್ಯಾಯದ ನಡುವಿನ ವ್ಯತ್ಯಾಸ ತಿಳಿಸಿಕೊಡಿ ಎನ್ನುತ್ತಾರೆ ಚಾಣಕ್ಯ.

ಮಕ್ಕಳ ಭವಿಷ್ಯ ರೂಪಿಸುವಿದರಲ್ಲಿ ಮಹತ್ತರವಾದ ಮೌಲ್ಯಗಳೆಂದರೆ ಅದು ನೈತಿಕ ಮೌಲ್ಯ. ಸರಿ-ತಪ್ಪು, ಸುಳ್ಳು-ಸತ್ಯ, ನ್ಯಾಯ -ಅನ್ಯಾಯ ಇದರ ಬಗ್ಗೆ ಅರ್ಥಯಿಸಿಕೊಳ್ಳದಿದ್ದರೆ ಮಕ್ಕಳ ಜೀವನ ದುರ್ಬಲವಾಗಲಿದೆ ಮತ್ತು ನೈತಿಕತೆ ಇಲ್ಲದ ವ್ಯಕ್ತಿಯಾಗಿ ಹೊರ ಹೊಮ್ಮುತ್ತಾರೆ. 

 

ಮಕ್ಕಳನ್ನು ಅತಿಯಾಗಿ ಮುದ್ದಿಸುವದರಿಂದ, ಮಕ್ಕಳು ಹಠಮಾರಿತನ ಮುಂತಾದ ದುರ್ಗುಣಗಳನ್ನು ಕಲಿಯುತ್ತಾರೆ. ತಪ್ಪು ಮಾಡಿದಾಗ ಮಕ್ಕಳನ್ನು ಶಿಕ್ಷಿಸಬೇಕಾಗುತ್ತದೆ. ಶಿಕ್ಷೆಗೆ ಹೆದರಿ ಮಕ್ಕಳು ಹಿರಿಯರಿಗೆ ವಿಧೇಯರಾಗಿ ನಡೆದುಕೊಂಡು ಸದ್ಗುಣಗಳನ್ನು ಕಲಿಯುತ್ತಾರೆ. 

ಚಾಣಕ್ಯನ ಪ್ರಕಾರ, ಮಕ್ಕಳನ್ನು ಮುದ್ದಿಸುವುದಕ್ಕೆ ಇತಿಮಿತಿ ಇರಬೇಕು ಎನ್ನುತ್ತಾರೆ. ಅತಿಯಾದ ಮುದ್ದು ಮಾಡುವಿಕೆ ಮುಂದಿನ ದಿನಗಳಲ್ಲಿ ಪೋಷಕರಿಗೆ ತಲೆಬಿಸಿಯಾಗಿ ಪರಿವರ್ತಿಸುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಮಕ್ಕಳನ್ನಾಗಲಿ, ಶಿಷ್ಯರನ್ನಾಗಲಿ, ಶಿಕ್ಷಿಸಬೇಕೇ ಹೊರತು ಅತಿಯಾಗಿ ಮುದ್ದಿಸಬಾರದು ಎನ್ನುತ್ತಾರೆ ಚಾಣಕ್ಯ.