22 July 2026 |

ಅಬುಧಾಬಿಯಿಂದ ಭಾರತದ 22 ನಗರಗಳಿಗೆ ನೇರ ವಿಮಾನ ಸೇವೆ: ಆಗಸ್ಟ್‌ನಿಂದ ವಿಸ್ತರಣೆ

  • 21 Jul 2026 06:26:18 PM

ಅಬುಧಾಬಿ: ಭಾರತದಿಂದ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಯುಎಇಯ ಅಬುಧಾಬಿಯ ಝಾಯೆದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಆಗಸ್ಟ್‌ನಿಂದ ಭಾರತದ 17 ನಗರಗಳಿಂದ 22 ನಗರಗಳಿಗೆ ನೇರ ವಿಮಾನ ಸಂಪರ್ಕವನ್ನು ವಿಸ್ತರಿಸಲು ನಿರ್ಧರಿಸಿದೆ.

 

ಈ ಮಾಹಿತಿಯನ್ನು ಅಬುಧಾಬಿ ಏರ್‌ಪೋರ್ಟ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಕಾರ್ಸ್ಟೆನ್ ನಾರ್ಲ್ಯಾಂಡ್ ತಿಳಿಸಿದ್ದಾರೆ.

 

ಟಾಟಾ ಸಮೂಹದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆ ಇತ್ತೀಚೆಗೆ ನವಿ ಮುಂಬೈ, ಇಂದೋರ್ ಹಾಗೂ ಲಖನೌ ನಗರಗಳಿಂದ ಅಬುಧಾಬಿಗೆ ನೇರ ವಿಮಾನ ಸೇವೆ ಆರಂಭಿಸಿದ್ದು, ಗುವಾಹಟಿಯಿಂದಲೂ ಮುಂದಿನ ತಿಂಗಳು ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ.

 

ಭಾರತವು ಅಬುಧಾಬಿಗೆ ವೇಗವಾಗಿ ಬೆಳೆಯುತ್ತಿರುವ ಪ್ರವಾಸೋದ್ಯಮ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಭಾರತೀಯ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇ.20ಕ್ಕೂ ಹೆಚ್ಚು ಏರಿಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.