ನವದೆಹಲಿ: ಆಫ್ರಿಕಾದ ಕೆಲವು ದೇಶಗಳಲ್ಲಿ ಎಬೋಲಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಬಿಗಿಗೊಳಿಸಿದೆ. ಯುಎಇ ಸೇರಿದಂತೆ ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಆರೋಗ್ಯ Self Declaration Form ಭರ್ತಿ ಮಾಡುವುದು ಕಡ್ಡಾಯವಾಗಿದೆ.
ಪ್ರಸ್ತುತ ಭಾರತದಲ್ಲಿ ಎಬೋಲಾ ಸೋಂಕಿನ ಯಾವುದೇ ದೃಢಪಟ್ಟ ಪ್ರಕರಣ ಇಲ್ಲ. ಆದಾಗ್ಯೂ ಮುನ್ನೆಚ್ಚರಿಕಾ ಕ್ರಮವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಘೋಷಣಾ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ.
1976ರಲ್ಲಿ ಮೊದಲ ಬಾರಿಗೆ ಎಬೋಲಾ ಎಂಬ ವೈರಸ್ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಅತ್ಯಂತ ಅಪಾಯಕಾರಿ ವೈರಲ್ ಸೋಂಕಾಗಿದೆ. ಸೋಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ದ್ರವಗಳ ಸಂಪರ್ಕದಿಂದ ಇದು ಹರಡುತ್ತದೆ. ತೀವ್ರ ಜ್ವರ, ತಲೆ ಹಾಗೂ ಸ್ನಾಯು ನೋವು, ವಾಂತಿ, ಅತಿಸಾರ, ತೀವ್ರ ದೌರ್ಬಲ್ಯ, ಗಂಭೀರ ಸಂದರ್ಭಗಳಲ್ಲಿ ರಕ್ತಸ್ರಾವ ಈ ಎಲ್ಲಾ ಲಕ್ಷಣಗಳು ಎಬೋಲಾ ಸೋಂಕಿತ ಮನುಷ್ಯರಲ್ಲಿ ಗೋಚರಿಸುತ್ತದೆ.
ಈ ಹಿಂದೆ ಕೋರೋಣ ಸಂದರ್ಭದಲ್ಲಿ ಈ ರೀತಿಯ ಡಿಕ್ಲೆರೇಷನ್ ಫಾರ್ಮ್ ಭರಿಸಬೇಕಾಗಿತ್ತು. ಇದೀಗ ಮತ್ತೊಮ್ಮೆ ಭಾರತಕ್ಕೆ ಪ್ರಯಾಣಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಅದೇ ರೀತಿಯ ಪ್ರಕ್ರಿಯೆ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ





