ಕಲ್ಲಡ್ಕ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರೆಬೆಟ್ಟು ಇಲ್ಲಿ ದಿನಾಂಕ 28 /10/ 2025 ರಂದು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಇವರ ವತಿಯಿಂದ ಶಾಲೆಗೆ ಕಂಪ್ಯೂಟರ್ ವಿತರಣೆ ಹಾಗೂ ನವೀಕ್ರತ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಮಾಜಿ ಶಾಸಕರು ವಿಟ್ಲ ವಿಧಾನಸಭಾ ಕ್ಷೇತ್ರ ಶ್ರೀಯುತ ಪದ್ಮನಾಭ ಕೊಟ್ಟಾರಿ, ಉಪಾಧ್ಯಕ್ಷರು ಶ್ರೀಯುತ ಲೋಕಾನಂದ ಏಳ್ತಿಮಾರ್, ನಿರ್ದೇಶಕರು ಶ್ರೀ ಯುತ ಅಜಿತ್, ಕಾರ್ಯನಿರ್ವಹಣಾಧಿಕಾರಿ ಶ್ರೀಯುತ ಗೋಪಾಲ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ವಿಠಲ್, ಉಪಾಧ್ಯಕ್ಷರಾದ ಶ್ರೀಮತಿ ಉಷಾ, ಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಲತೀಶ್, ಶ್ರೀಮತಿ ಮಮತಾ, ಬಿ ಆರ್ ಸಿ ಕೇಂದ್ರ ಬಂಟ್ವಾಳ ಶ್ರೀಮತಿ ವನಿತ ಬಿ ಆರ್ ಪಿ, ಕೌನ್ಸಿಲರ್ ಸಂಧ್ಯಾ ಹಾಗೂ ಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರ ಸಾಲ್ಯಾನ್ ಪುಷ್ಪರಾಜ್ ಧರ್ಖಾಸ್ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮಾಧವ ಸಾಲ್ಯಾನ್ ರಮೇಶ್ ಪೂರ್ಲಿಪ್ಪಾಡಿ ಪೋಷಕರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ದೇವಿಕಾ. ಬಿ ಇವರು ಸ್ವಾಗತಿಸಿ, ಎಸ್ ಡಿ ಎಂ ಸಿ ಅಧ್ಯಕ್ಷರು ವಂದಿಸಿದರು. ಗೌರವ ಶಿಕ್ಷಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು. ಈ ಸುಸಂದರ್ಭದಲ್ಲಿ ಶಾಲೆಗೆ ಕೊಡುಗೈ ಧಾನಿಯಾದ ಕಿಶೋರ್ ಕುಮಾರ್ ದಾಸಕೋಡಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು





