ಬಂಟ್ವಾಳ: ತಾಲೂಕಿನ ಕಡೇಶಿವಾಲಯ ಗ್ರಾಮದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಸರುವಾಸಿಯಾಗಿರುವ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ನ 9ನೇ ವರ್ಷದ "ವಾರ್ಷಿಕ ಸಮಾರಂಭ ಹಾಗೂ ಪದಗ್ರಹಣ ಕಾರ್ಯಕ್ರಮವು 01/02/2026 ನೇ ಆದಿತ್ಯವಾರದಂದು ಪೆರ್ಲಾಪು ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಬೆಳಗ್ಗೆ ಗಂಟೆ 8:30 ರಿಂದ 9:30 ರವರೆ ಕುಣಿತ ಭಜನೆ ನಡೆಯಲಿದೆ. ಬಳಿಕ ಪೂರ್ವಹ್ನ 9:30ಕ್ಕೆ ಸರಿಯಾಗಿ ಗುರು ಪೂಜೆಯ ಮೂಲಕ ಕಾರ್ಯಕ್ರಮವು ಆರಂಭಗೊಳ್ಳಲಿದೆ. 10 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಮೋಹನ್ ಕುಮಾರ್ ನೆತ್ತರ ಕಡೇಶಿವಾಲಯ - ಯುವ ವಕೀಲರು ಬಂಟ್ವಾಳ ಬಿಸಿ ರೋಡ್, ದಿಕ್ಸೂಚಿ ಭಾಷಣಕಾರರಾಗಿ ಶ್ರೀ ಪ್ರಶಾಂತ್ ಅನಂತಾಡಿ - ಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜು, ಕೊಂಬೆಟ್ಟು ಪುತ್ತೂರು, ಮುಖ್ಯ ಅತಿಥಿಗಳಾಗಿ ಶ್ರೀ ಭುವನೇಶ್ ಪಚ್ಚಿನಡ್ಕ - ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ.), ಶ್ರೀ ಜಯರಾಜ್ ಸೋಮಸುಂದರಂ - ಅಧ್ಯಕ್ಷರು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು, ಶ್ರೀಮತಿ ಗೀತಾ ಕುಮಾರಿ - ಗಣಿತ ಶಿಕ್ಷಕರು ಸರಕಾರಿ ಪ್ರೌಢ ಶಾಲೆ, ಕಡೇಶಿವಾಲಯ ಇವರು ಸಭಾಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ವೇದಿಕೆಯಲ್ಲಿ ಪ್ರಧಾನ ಸನ್ಮಾನವನ್ನು ಸ್ವೀಕರಿಸಲಿರುವವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಶಬರಿ ಟ್ರಾವೆಲ್ಸ್ ನ ಮಾಲ್ಹಕರು ಹಾಗೂ ಬಿಲ್ಲವ ಬ್ರಿಗೇಡ್ ನ ಸಂಸ್ಥಾಪಕರಾಗಿರುವ ಶ್ರೀ ಸದಾನಂದ ಪೂಜಾರಿ ಇವರು. ಅಭಿನಂದನಾ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಶ್ರೀ ಅಶೋಕ್ ಶಾಂತಿ ಗುಡ್ಡೆಸ್ವಸ್ತಿಕ್ ಏಜೆನ್ಸಿ ಬೆಂಗಳೂರು, ಕಡೇಶಿವಾಲಯ ಸರಕಾರಿ ಪ್ರೌಢಶಾಲೆ ಇಲ್ಲಿನ ಗಣಿತ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಹಾಗೂ ಯುವ ಪ್ರತಿಭೆ ದಿಶಾ ಕೆ ಬರಿಮಾರು ಅಭಿನಂದನೆ ಸ್ವೀಕರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ 2024-25 ನೇ ಶೈಕ್ಷಣಿಕ ವಾರ್ಷಿಕ ಪರೀಕ್ಷೆ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನಡೆಯಲಿದೆ.





