ಬಂಟ್ವಾಳ: ಕಡೇಶ್ವಾಲ್ಯ ರೋಟರಿ ಸಮುದಾಯ ದಳದ ವಾರ್ಷಿಕೋತ್ಸವ, ಸಮ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಪೆರ್ಲಾಪು ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ , ರೊ .PHF ಬಸ್ತಿ ಮಾಧವ ಶೆಣೈ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಶ್ರೀ ಪದ್ಮರಾಜ್ ಆರ್ ಪೂಜಾರಿ, ಉದ್ಯಮಿಗಳಾದ ಸುಧೀರ್ ಕುಮಾರ್ ಶೆಟ್ಟಿ ಪೇರಮೊಗರು, ರೋಟರಿ ಕ್ಲಬ್ ಬಂಟ್ವಾಳದ ಕಾರ್ಯದರ್ಶಿ ಯಾಸೀರ್ ಮೊಹಮ್ಮದ್, ರೋಟರಿ ಸಮುದಾಯ ದಳದ ಅಧ್ಯಕ್ಷ ರತ್ನಾಕರ ನಾಯ್ಕ್ ಪ್ರತಾಪನಗರ, ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಕಡೇಶ್ವಾಲ್ಯ ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆ ಹಾಗೂ ಕಡೇಶ್ವಾಲ್ಯ ಸರಕಾರಿ ಕಡೇಶ್ವಾಲ್ಯ ಪ್ರೌಢಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕೆನರಾ ಬ್ಯಾಂಕಿನ ನಿವೃತ್ತ ಸಹಾಯಕ ಮಹಾಪ್ರಬಂಧಕರಾದ ಶ್ರೀ ಮಾಧವ ರೈ ಅಮೈ ಭಂಡಸಾಲೆ ಮತ್ತು ಕೇಂದ್ರ ರೈಲ್ವೇ ಇಲಾಖೆಯ Rtd ಆಪರೇಷನ್ ಥಿಯೇಟರ್ ಅಸಿಸ್ಟೆಂಟ್ ಶ್ರೀ ಚಂದಪ್ಪ ನಾಯ್ಕ ದೇoತಡ್ಕ ಇವರನ್ನು ಸನ್ಮಾನಿಸಿ, ಮಂಗಳ ಶಾಮಿಯಾನ ಕಲ್ಲಾಜೆ ಇದರ ಮಾಲಕರಾದ ಶ್ರೀಮತಿ ಮತ್ತು ಶ್ರೀ ಮೋಹನ್ ಕುಮಾರ್ ಕಲ್ಲಾಜೆ ಇವರನ್ನು ಅಭಿನಂದಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಡೇಶ್ವಾಲ್ಯ 'ಜಿ.ವಿ.ಡ್ಯಾನ್ಸ್ ಕ್ರಿವ್ ಅವರಿಂದ ನೃತ್ಯ ಕಾರ್ಯಕ್ರಮ', ಕಾಪು ರಂಗತರಂಗ ಕಲಾವಿದರಿಂದ ತುಳು ನಾಟಕ 'ಕುಟ್ಯಣ್ಣನ ಕುಟುಂಬ' ಪ್ರದರ್ಶನಗೊಂಡಿತು. ಸಂಸ್ಥೆಯ ಸಲಹಾ ಸಮಿತಿ ಚೇರ್‌ಮೆನ್ ಕೆ.ಕೆ.ಶೆಟ್ಟಿ ಕುರುಂಬಾಜೆ ಸ್ವಾಗತಿಸಿ, ಮಾಜಿ ಅಧ್ಯಕ್ಷ ಶೀನ ನಾಯ್ಕ ನೆಕ್ಕಿಲಾಡಿ ವಂದಿಸಿದರು. ನವೀನ್ ನಾಯ್ಕ ಪಿಳಿಂಗಳ ಹಾಗೂ ಯೋಗೀಶ್ ನಾಯ್ಕ್ ದಾಳಿಂಬ ಕಾರ್ಯಕ್ರಮ ನಿರ್ವಹಿಸಿದರು.





