16 January 2026 | Join group

ಕುಕ್ಕಾಜೆಯಲ್ಲಿ ದಯಾ ಕ್ರಿಯೇಷನ್ ಬಾಯಾರು ಮತ್ತು ದಯಾ ಮೆಲೋಡಿಸ್ ಮ್ಯೂಸಿಕಲ್ ಇದರ ಪಂಚಮ ವಾರ್ಷಿಕೋತ್ಸವ

  • 13 Jan 2026 09:53:26 AM

ಕುಕ್ಕಾಜೆ: ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಪೂಜ್ಯ ಧರ್ಮದರ್ಶಿ ಶ್ರೀ ಶ್ರೀ ಶ್ರೀ ಕೃಷ್ಣ ಗುರೂಜಿ ಇವರ ಮಾರ್ಗದರ್ಶನದಲ್ಲಿ ದಯಾ ಕ್ರಿಯೇಷನ್ ಬಾಯಾರು ಹಾಗೂ ದಯಾ ಮೆಲೋಡಿಸ್ ಮ್ಯೂಸಿಕಲ್ ಇದರ ಪಂಚಮ ವರ್ಷದ ಸಂಭ್ರಮಾಚರಣೆಯು ಇತ್ತೀಚಿಗೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಸಭಾಂಗಣ ದಲ್ಲಿ ನಡೆಯಿತು.

 

"ದೇವರ ಸೇವೆ ಮಾಡಲು ನಾನಾ ರೀತಿಯ ಮಾರ್ಗಗಳು ಇದರಲ್ಲಿ ಕಲಾಮತೆಯ ಸೇವೆಯು ಒಂದು ದೊಡ್ಡ ಸೇವೆ ತಮ್ಮ ತಂಡಕ್ಕೆ ಕಲಾಮಾತೆಯ ಅನುಗ್ರಹ ಸದಾ ಇರಲಿ" ಎಂದು ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಯವರು ಅನುಗ್ರಹದ ಭಾಷಣ ಮಾಡಿದರು.

 

ಸಭೆಯಲ್ಲಿ ಕ್ಷೇತ್ರದ ಮುಕ್ತೇಶ್ವರರು ಶ್ರೀ ಎಂ.ಕೆ ಕುಕ್ಕಾಜೆ ಯವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ್ ಬಾಳೆಕಲ್ಲು, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರು, ಶೇಖರ ಶೆಟ್ಟಿ ನಿವೃತ್ತ ಅಧ್ಯಾಪಕರು ಬಾಯಾರು, ಜಯಾ ಮಣಿಯಂಪಾರೆ, ವಿಶೇಷ ಚಾನಲ್ ಸಂಪಾದಕರು, ಪುಷ್ಪ ಕಾಮಜಾಲು ಕುಕ್ಕಾಜೆ ಕ್ಷೇತ್ರದ ಮಹಿಳಾ ಸಂಘದ ಅಧ್ಯಕ್ಷೆ, ಸಂಜೀವ ಕುಲಾಲ್ ಪಳನೀರು ಅದ್ಯಕ್ಷರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ತಾರಿದಳ, ದಯಾನಂದ ಅಮೀನ್ ಬಾಯಾರು ಸ್ಥಾಪಕರು ದಯಾ ಕ್ರಿಯೇಷನ್ ಬಾಯಾರು ಮತ್ತಿತರರು ಉಪಸ್ಥಿತರಿದ್ದರು.

 

ಈ ಸಂದರ್ಭದಲ್ಲಿ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಾದ ಕೊರಗಪ್ಪ ಪೂಜಾರಿ ಬಾಳೆಕಲ್ಲು, ಸುದರ್ಶನ ತಾರಿದಳ, ಶ್ವೇತ ಪ್ರವೀಣ್ ಆಚಾರ್ಯ ಮೂಡುಬಿದಿರೆ, ದಿನೇಶ್ ಮಿತ್ತನಡ್ಕ, ಕುಶಿ ವಿಟ್ಲ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಸದಸ್ಯರಾದ ಸುಶ್ಮಿತ,ಶ್ರೀಜಾ ಕುಕ್ಕಾಜೆ, ಸುಪ್ರಿತ ಕುಕ್ಕಾಜೆ, ಸನ್ಮಾನ ಪತ್ರ ವಚಿಸಿದರು, ದೇವಿ ಪ್ರಸಾದ್ ಕುಕ್ಕಾಜೆ ಸ್ವಾಗತಿಸಿ ಸತ್ಯ ಪ್ರಸಾದ್ ಕುಕ್ಕಾಜೆ ಮತ್ತು ರವಿ ಎಸ್ ಎಂ ಕುಕ್ಕಾಜೆ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಪಂದನ ಕಲಾವಿದರು ಬಂಟ್ವಾಳ ಇವರಿಂದ 'ಸಾದಿ ತಿಕ್ಕುಜಿ' ಎಂಬ ನಾಟಕ ನಡೆಯಿತು.