31 January 2026 | Join group

ಕಾಂಜಿರ್ ಕೋಡಿ ಕುಪ್ಪೆಟ್ಟುಪಂಜುರ್ಲಿ ದೈವದ ದರಿ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

  • 12 Nov 2025 09:34:30 AM

ಬಂಟ್ವಾಳ: ಬಂಟ್ವಾಳ ತಾಲೂಕು ಬಿ ಕಸಬ ಗ್ರಾಮದ ಕುಪ್ಪೆಟ್ಟು ಪಂಜುರ್ಲಿ ಧರ್ಮ ಚಾವಡಿ ಕಾಂಜಿರ್ ಕೋಡಿಯಲ್ಲಿ ಡಿಸೆಂಬರ್ 21ರಿಂದ 24 ರ ತನಕ ನಡೆಯುವ ದೈವದ ದರಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಾಂಜಿರ್ ಕೋಡಿ ಧರ್ಮ ಚಾವಡಿಯಲ್ಲಿ ಮಂಗಳವಾರ ದಿವಂಗತ ತಿಮ್ಮಪ್ಪ ಪೂಜಾರಿ ಕಾಂಜಿರ್ ಕೋಡಿರವರ ಧರ್ಮಪತ್ನಿ ವಾರಿಜಾ ಬಿಡುಗಡೆಗೊಳಿಸಿದರು.

 

ಈ ಸಂದರ್ಭದಲ್ಲಿ ಸತೀಶ್ ಪೂಜಾರಿ ಅಕ್ಷತಾ ಕಾಂಜಿರ್ ಕೋಡಿ, ಹರೀಶ್ ಕೋಟ್ಯಾನ್ ಕುದನೆ, ಹರೀಶ್ ಸಾಲಿಯಾನ್ ಅಜಕಲ, ಚಂದ್ರಶೇಖರ್, ಕೊರಗಪ್ಪ ಪೂಜಾರಿ, ಚಂದು ಪೂಜಾರಿ, ಪ್ರದೀಪ್ ಸುವರ್ಣ ನೆಲ್ಲಿಕಾರು, ಹರೀಶ್ ಪೂಜಾರಿ ಮಾರೋಡಿ, ರಂಜಿತ್ ದೇವಾಡಿಗ, ಧನುಷ್ ದೇವಾಡಿಗ, ಸಂದೇಶ್ ಮಡಿವಾಳ, ನವೀನ್ ದೇವಾಡಿಗ, ಸಂತೋಷ್ ಪೂಜಾರಿ, ನೋಣಯ್ಯ ಪೂಜಾರಿ, ವಾಸು ಪೂಜಾರಿ, ಕಾವ್ಯ, ಹಾಗೂ ಅದ್ವಿಶ್ ಅದ್ವಿತಿ ಕಾಂಜರ್ ಕೋಡಿ, ಮೊದಲಾದವರು ಉಪಸ್ಥಿತಿರಿದ್ದರು.