ಮಾಣಿ: ಸ್ವಾರ್ಥವಿಲ್ಲದ ಶ್ರಮ, ಸಮಯ ಮತ್ತು ಸಂಪನ್ಮೂಲಗಳನ್ನು ಹಂಚಿಕೊಂಡು ನಿರ್ಮಾಣಗೊಂಡ ಮನೆ ಕೇವಲ ಇಟ್ಟಿಗೆ ಮತ್ತು ಸಿಮೆಂಟಿನಿಂದ ಕಟ್ಟಿದ ಮನೆಯಾಗಿಲ್ಲ; ಇದು ಯುವ ಹೃದಯಗಳ ದಯೆಯಿಂದ, ಮಮತೆಯಿಂದ ಮತ್ತು ನಿಸ್ವಾರ್ಥ ಸೇವೆಯಿಂದ ರೂಪುಗೊಂಡ ಆಶ್ರಯ. ಇಂದು ನಾವು ಸಾಕ್ಷಿಯಾಗಿರುವುದು ಕೇವಲ ಒಂದು ಮನೆಯ ಹಸ್ತಾಂತರ ಕಾರ್ಯಕ್ರಮವಲ್ಲ, ಇದು ಮಾನವೀಯತೆ, ಕರುಣೆ ಮತ್ತು ಸೇವಾಭಾವದ ಜೀವಂತ ನಿದರ್ಶನ.
ಯುವವಾಹಿನಿ ಸಂಸ್ಥೆ ಇಂದು ಅಶಕ್ತರ ಬಾಳಿನಲ್ಲಿ ನಿಜವಾದ ನೆಮ್ಮದಿಯ ಬೆಳಕನ್ನು ಮೂಡಿಸಿದೆ. ಒಂದು ಬಡ ಕುಟುಂಬಕ್ಕೆ ಆಶ್ರಯವೆಂದರೆ ಅವರ ಬದುಕಿನ ಅತ್ಯಂತ ದೊಡ್ಡ ಕನಸು. ಆ ಕನಸನ್ನು ನಿಜಗೊಳಿಸುವ ಮೂಲಕ ಯುವವಾಹಿನಿಯ ಯುವಕರು ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಿದ್ದಾರೆ ಎಂದು ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ತಿಳಿಸಿದರು.
ಅವರು ನ. 12 ಬುಧವಾರ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಮಾಣಿ ಘಟಕದ ಆತಿಥ್ಯದಲ್ಲಿ ಅನಂತಾಡಿ ಗ್ರಾಮದ ಪೆಲತ್ತಡಿ ಕಮಲ ಪೂಜಾರ್ತಿಯವರಿಗೆ "ಯುವಾಶ್ರಯ," ಮನೆ ಹಸ್ತಾಂತರ ಹಾಗೂ ತುಳಸಿ ಪೂಜೆ ಕಾರ್ಯಕ್ರಮದಲ್ಲಿ ನೂತನ ಮನೆಯ ಕೀ ಹಸ್ತಾಂತರ ಮಾಡಿ ಮಾತನಾಡಿದರು.

ಅಖಿಲ ಭಾರತ ಬಿಲ್ಲವ ಯೂನಿಯನ್ (ರಿ.) ಅಧ್ಯಕ್ಷ ಅಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣ ಸಮಾರಂಭ ಉದ್ಘಾಟಿಸಿ ಶುಭ ಹಾರೈಕೆ ಮಾಡಿದರು. ಯುವವಾಹಿನಿಯ ಪ್ರತಿಷ್ಠಿತ ಘಟಕವಾದ ಮಾಣಿ ಘಟಕದ ಸಾಧನೆ ಶ್ಲಾಘನೀಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ತಿಳಿಸಿದರು.

ಆಶ್ರಯ ಮನೆಯ ಫಲಾನುಭವಿಗಳ ಪರವಾಗಿ ಸತೀಶ್ ಪೂಜಾರಿ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಶಿವರಾಜ್ ಪಿ ಆರ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ರವಿಚಂದ್ರ ರವರನ್ನು ಫಲಾನುಭವಿಗಳ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮನೆ ನಿರ್ಮಿಸಲು ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಮಾಣಿ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಸೂರ್ಯ, ವಕೀಲ ರಂಜಿತ್ ಪೂಜಾರಿ ಮೈರ, ಬಂಟ್ವಾಳ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ ಪೂಜಾರಿ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಸುರೇಶ್ ಪೂಜಾರಿ ಬಾಕಿಲ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರಿ, ಸಮಾಜ ಸೇವಾ ನಿರ್ದೇಶಕ ರವಿಚಂದ್ರ ಬಾಬಣ ಕಟ್ಟೆ, ಮಾಣಿ ಘಟಕದ ಸಮಾಜ ಸೇವಾ ನಿರ್ದೇಶಕ ಕಿರಣ್ ಗೋಳಿಕಟ್ಟೆ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಸುಮಲತಾ ಎನ್ ಸುವರ್ಣ, ಯಶವಂತ ದೇರಾಜೆ, ಬಿರುವೆರ್ ಕಡೇಶಿವಾಲಯ ಅಧ್ಯಕ್ಷ ಯಶವಂತ ಪತ್ತು ಕೊಡಂಗೆ, ಮಾಣಿ ನಾರಾಯಣ ಗುರು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಸಾಲಿಯನ್, ಯುವವಾಹಿನಿ ಕೇಂದ್ರ ಸಮಿತಿಯ ಒಂದನೇ ಉಪಾಧ್ಯಕ್ಷರಾದ ಅಶೋಕ್ ಪಡ್ಪು, ಜತೆ ಕಾರ್ಯದರ್ಶಿ ಭಾಸ್ಕರ್ ಕೋಟ್ಯಾನ್, ಸಾಂಸ್ಕೃತಿಕ ನಿರ್ದೇಶಕ ಸುಶಾಂತ್ ಕರ್ಕೇರ, ಮಾಜಿ ಅಧ್ಯಕ್ಷರುಗಳಾದ, ಜಯಂತ್ ನಡುಬೈಲು, ಡಾ. ರಾಜಾರಾಮ್ ಕೆ ಬಿ, ರಾಜೇಶ್ ಬಿ, ಪ್ರೇಮನಾಥ್ ಕೆ, ಯುವವಾಹಿನಿ ವಿಟ್ಲ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ವಿಟ್ಲ ಮೊದಲಾದವರು ಭಾಗವಹಿಸಿದ್ದರು.





