31 January 2026 | Join group

ಪ್ರತಿಭಾ ಕಾರಂಜಿ ಕಡೇಶಿವಾಲಯ ದ.ಕ.ಜಿ.ಪ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

  • 14 Nov 2025 11:30:46 AM

ಬಂಟ್ವಾಳ, ಕಡೇಶಿವಾಲಯ : ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ ಗಡಿಯಾರ ಶಾಲೆಯಲ್ಲಿ ನಡೆದ ಕಡೇಶಿವಾಲಯ ಮತ್ತು ಕೆದಿಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- 2025 ರ ಸ್ಪರ್ಧೆಯಲ್ಲಿ ಕಡೇಶಿವಾಲಯ ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕಡೇಶಿವಾಲಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

 

ಯಶಿಕ ಕನ್ನಡ ಕಂಠಪಾಠ ಪ್ರಥಮ, ನಿಧಿ ಎಸ್ ದೇಶಭಕ್ತಿ ಗೀತೆ ಮತ್ತು ಭಕ್ತಿ ಗೀತೆ ಪ್ರಥಮ, ದಿಶಾನಿ ಸಂಸ್ಕೃತ ಪಠಣ ಪ್ರಥಮ, ಶ್ರಾವಣ್ಯ ಎಸ್ ನಾಯ್ಕ ಛದ್ಮ ವೇಷ ಪ್ರಥಮ, ಆರಾಧ್ಯ ಜಿ ಕಥೆ ಹೇಳುವುದು ಮತ್ತು ಅಭಿನಯ ಗೀತೆ ಪ್ರಥಮ, ಯಶ್ವಿನ್ ಚಿತ್ರಕಲೆ ಪ್ರಥಮ, ಧನ್ವಿತ್ ದೇಶಭಕ್ತಿ ಗೀತೆ ಮತ್ತು ಭಕ್ತಿ ಗೀತೆ ಪ್ರಥಮ, ಸಾನ್ವಿ ಪ್ರಬಂಧ ರಚನೆ ಪ್ರಥಮ, ತನುಶ್ರೀ ಕಥೆ ಹೇಳುವುದು ಪ್ರಥಮ, ಚಿನ್ಮಯಿ ಬಿ ಅಭಿನಯ ಗೀತೆ ಪ್ರಥಮ, ಕುಶಿತ್ ಆಶುಭಾಷಣ ಪ್ರಥಮ ಸ್ಥಾನ ಪಡೆದರು.

 

ಫಾತಿಮಾ ಶಹದಿಯ ಇಂಗ್ಲಿಷ್ ಕಂಠಪಾಠ ದ್ವಿತೀಯ, ಧ್ರುವ ಚರಣ್ ಮಿಮಿಕ್ರಿ ದ್ವಿತೀಯ, ಹಾರ್ದಿಕ್ ಕ್ಲೇ ಮಾಡಲಿಂಗ್ ತೃತೀಯ, ಶ್ರಾವಣ್ಯ ಎಸ್ ನಾಯ್ಕ ಆಶುಭಾಷಣ ತೃತೀಯ, ತನುಶ್ರೀ ಇಂಗ್ಲಿಷ್ ಕಂಠಪಾಠ ತೃತೀಯ, ದಿವ್ಯ ಸಂಸ್ಕೃತ ಪಠಣ ತೃತೀಯ, ಸಲೀಮ್ ಅರೇಬಿಕ್ ಪಠಣ ತೃತೀಯ, ವೈಶಾಖ ಕ್ಲೇ ಮಾಡಲಿಂಗ್ ತೃತೀಯ, ಚಿನ್ಮಯಿ ಕವನ ವಾಚನ ತೃತೀಯ ಸ್ಥಾನ ಪಡೆದು ಶಾಲೆಗೆ ಸಮಗ್ರ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಪಡೆದ ಮಕ್ಕಳನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದದ ಪರವಾಗಿ ಅಭಿನಂದಿಸಲಾಯಿತು.