ಕಲ್ಲಡ್ಕ: ಮಕ್ಕಳಿಗೆ ಪ್ರೀತಿ ಮಮತೆಯನ್ನು ತುಂಬಿಸುವ ಕೇಂದ್ರವೇ ಅಂಗನವಾಡಿ ಕೇಂದ್ರ, ಅಂತ ಕೇಂದ್ರಗಳನ್ನು ಉಳಿಸಿ ಬೆಳೆಸುವುದು ಬಹಳ ಮುಖ್ಯ ಎಂದು ವೀರಕಂಭ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬಂಗೇರ ಬಾಯಿಲ ಹೇಳಿದರು.
ಅವರು ಶನಿವಾರ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಬಾಯಿಲ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶಿಲ್ಪ ನಾಗರಾಜ್ ವಹಿಸಿದ್ದರು. ಈ ಸಂದರ್ಭದಲ್ಲಿ ಅಂಗನವಾಡಿಯ ಎಲ್ಲಾ ಮಕ್ಕಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ದನ ಪೂಜಾರಿ ಗೊಳಿಮಾರ್ ಸಮವಸ್ತ್ರ ಕೊಡುಗೆಯಾಗಿ ನೀಡಿ ಶುಭ ಹಾರೈಸಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ಮಾಡಿದ ವಿವಿಧ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿದ ಗುತ್ತಿಗೆದಾರ ನಾಗರಾಜ್ ಶೆಟ್ಟಿ, ಮಾಧ್ಯಮ ಮಿತ್ರ ಚಿನ್ನಾ ಕಲ್ಲಡ್ಕ, ಅಂಗನವಾಡಿ ನಿವೃತ್ತ ಶಿಕ್ಷಕಿ ಜಯಶ್ರೀ, ಆಶಾ ಕಾರ್ಯಕರ್ತೆ ಕೋಮಲಾಕ್ಷಿ, ಸ್ನೇಹ ಸಂಜೀವಿನಿ ಒಕ್ಕೂಟದ ಎಲ್ ಸಿ ಆರ್ ಪಿ ಗಳಾದ ಜಯಂತಿ, ರೂಪಶ್ರೀ, ಕೃಷಿ ಸಖಿ ನಮಿತಾ, ಮೊದಲಾದವರು ಉಪಸ್ಥಿತರಿದ್ದರು.
ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು. ಮಕ್ಕಳಿಗೆ ಬಹುಮಾನದ ವ್ಯವಸ್ಥೆಯನ್ನು ಶ್ವೇತಾ ಶ್ರೀ ಹಾಗೂ ಸಿಹಿತಿಂಡಿಯ ವ್ಯವಸ್ಥೆಯನ್ನು ಕುಮಾರಿ ಗೀತಾ ಒದಗಿಸಿ ಕೊಟ್ಟಿದ್ದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳ ಪೋಷಕರು, ಶ್ರೀ ಮಹಮ್ಮಾಯಿ ಹಾಗೂ ಶ್ರೀ ಉಳ್ಳಾಲ್ತಿ ಶ್ರೀ ಶಕ್ತಿ ಸಂಘದ ಸದಸ್ಯರುಗಳು, ಭಾಗವಹಿಸಿದ್ದರು. ಧರ್ಮಾವತಿ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಪ್ರಜ್ಞ ವಂದಿಸಿದರು. ಅಂಗನವಾಡಿ ಸಹಾಯಕಿ ತೇಜಾವತಿ ಸಹಕರಿಸಿದರು.





