ಕಡೇಶಿವಾಲಯ, ಫೆ. 25 : ಮಹಾತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಕಡೇಶಿವಾಲಯದಲ್ಲಿ ನಾಳೆ ಫೆಬ್ರವರಿ 26,2025 ರ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ರುದ್ರಹೋಮ ಮತ್ತು ವಿಶೇಷ ರಂಗಪೂಜೆ ನೆರವೇರಲಿದೆ.
ಬೆಳಿಗ್ಗೆ 7.00 ಗಂಟೆಗೆ ಸರಿಯಾಗಿ ಬ್ರಹ್ಮಶ್ರೀ ಉಚ್ಚಿಲಂತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ರುದ್ರಹೋಮ ನಡೆಯಲಿದೆ. ಹಾಗೂ ಸಂಜೆ ಗಂಟೆ 6.30 ರಿಂದ ಶ್ರೀ ಕ್ಷೇತ್ರದ ವತಿಯಿಂದ ವಿಶೇಷ ರಂಗಪೂಜೆ ಜರಗಲಿರುಹುದು.
ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ ;
ಬೆಳಿಗ್ಗೆ ಗಂಟೆ 7.00 ಕ್ಕೆ - ಪ್ರಾರ್ಥನೆ, ರುದ್ರಪಾರಾಯಣ, ರುದ್ರಹೋಮ.
ಬೆಳಿಗ್ಗೆ ಗಂಟೆ 11.00 ಕ್ಕೆ - ಪೂರ್ಣಾಹುತಿ, ಪ್ರಸಾದ ವಿತರಣೆ, ಮಂತ್ರಾಕ್ಷತೆ.
ಮದ್ಯಾಹ್ನ 1.00 ಗಂಟೆಯಿಂದ - ಅನ್ನಸಂತರ್ಪಣೆ.
ಸಂಜೆ 6.00 ರಿಂದ - ಕುಣಿತ ಭಜನೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಆರ್. ಶೆಟ್ಟಿ ನುಳಿಯಾಲು ಮತ್ತು ಸದಸ್ಯರು ವ್ಯವಸ್ಥಾಪನಾ ಸಮಿತಿ, ಅರ್ಚಕರು, ನೌಕರವೃಂದ ಹಾಗೂ ಊರ ಭಕ್ತಾಭಿಮಾನಿಗಳು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಕಡೇಶಿವಾಲಯ ವತಿಯಿಂದ ಆಹ್ವಾನಿಸಿದ್ದಾರೆ.