17 February 2026 | Join group

ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಶತ ರುದ್ರಾಭಿಷೇಕ–ರುದ್ರ ಹೋಮ ಭಕ್ತಿಭಾವದಿಂದ ಸಂಪನ್ನ

  • 16 Feb 2026 08:39:54 PM

ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಮಹಾತೋಬಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಕಡೇಶಿವಾಲಯದಲ್ಲಿ ದಿನಾಂಕ 15-02-2026 ರವಿವಾರ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು.

 

ನೀಲೇಶ್ವರ ಬ್ರಹ್ಮ ಶ್ರೀ ಉಚ್ಚಿಲಾಂತಾಯ ಪದ್ಮಾನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಗಣಪತಿ ಹೋಮ, ಶತ ರುದ್ರಾಭಿಷೇಕ, ರುದ್ರ ಹೋಮ ಹಾಗೂ ರಾತ್ರಿ ಸಣ್ಣ ರಂಗ ಪೂಜೆ ನಡೆಯಿತು. ಶತ ರುದ್ರಾಭಿಷೇಕ ಮತ್ತು ರುದ್ರ ಹೋಮದ ವಿಧಿವಿಧಾನಗಳನ್ನು ನೀಲೇಶ್ವರ ಉಚ್ಚಿಲಾಂತಾಯ ಪದ್ಮಾನಾಭ ತಂತ್ರಿಯವರ ನೇತೃತ್ವದ ವೈದಿಕ ತಂಡ ನೆರವೇರಿಸಿತು. ಸಣ್ಣ ರಂಗ ಪೂಜೆಯ ವಿಧಿವಿಧಾನಗಳನ್ನು ಕ್ಷೇತ್ರದ ತಂತ್ರಿಗಳಾದ ಸುಬ್ರಮಣ್ಯ ಭಟ್ ಮುಂಗೂರು, ಹರಿ ಪ್ರಸಾದ್ ಭಟ್ ಹಾಗೂ ಅನಂತ ಪದ್ಮನಾಭ ಭಟ್ ಅವರ ವೈದಿಕ ತಂಡ ನಡೆಸಿಕೊಟ್ಟರು.

 

ಮಧ್ಯಾಹ್ನ 1 ಗಂಟೆಗೆ ಶ್ರೀಮತಿ ಕಮಲ ಬಾಬು ನಾಯ್ಕ್ ಕುರುಂಬುಲಾಜೆ ಅವರಿಂದ ಸಮಾರಾಧನಾ ಸೇವೆ ಜರಗಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ಶೆಟ್ಟಿ ನುಳಿಯಲು, ಸದಸ್ಯರಾದ ಈಶ್ವರ ಪೂಜಾರಿ ಹಿರ್ತಡ್ಕ, ಚಿದಾನಂದ ಕಡೇಶಿವಾಲಯ, ಸತೀಶಚಂದ್ರ ಶೆಟ್ಟಿ ಬಾವಾಗುತ್ತು, ಡಿ. ಸಂಜೀವ ಪೂಜಾರಿ ದಾಸಕೋಡಿ, ಶೀನ ನಾಯ್ಕ್ ನೆಕ್ಕಿಲಾಡಿ, ಶ್ರೀಮತಿ ಶ್ರುತಿ ಹರೀಶ್ಚಂದ್ರ ಕಾಡಬೆಟ್ಟು, ಪ್ರೇಮ ಶಿವಪ್ರಸಾದ್ ಶೆಟ್ಟಿ ಮಿತ್ತಿಮಾರು ಉಪಸ್ಥಿತರಿದ್ದರು.

 

ಜೀರ್ಣೋದ್ದಾರ ಸಮಿತಿಯ ಸದಸ್ಯರಾದ ಹರಿಶ್ಚಂದ್ರ ಕಾಡಬೆಟ್ಟು, ನವೀನ್ ನಾಯ್ಕ್ ನೆಕ್ಕಿಲಾಡಿ, ಪ್ರದೀಪ್ ಕುಮಾರ್ ಶೆಟ್ಟಿ ಅಮೈ, ದೊಡ್ಡ ರಂಗ ಪೂಜಾ ಸಮಿತಿಯ ಅಧ್ಯಕ್ಷರಾದ ಕೂಸಪ್ಪ ಪೂಜಾರಿ ಪುನುಕೇದಡಿ, ಉಪಾಧ್ಯಕ್ಷರಾದ ನವೀನ್ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ತಿರುಮಲೇಶ್ವರ ಭಟ್ ಕೈಂತಾಜೆ ಹಾಗೂ ಸಾಂತಪ್ಪ ಪೂಜಾರಿ ಪಚ್ಚಡಿ ಬೈಲು ಉಪಸ್ಥಿತರಿದ್ದರು.

 

ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿದ್ಯಾದರ್ ರೈ ಪೆರ್ಲಾಪು, ಬಾಳ್ತಿಲ ಗುತ್ತು ಮನೆಯ ಯಜಮಾನರಾದ ಬ್ರಿಜೇಶ್ ಜೈನ್, ಕಾಂಪ್ರಬೈಲು ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಸಪಲ್ಯ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಊರು–ಪರಊರ ಭಕ್ತಾದಿಗಳು ಭಾಗವಹಿಸಿದರು.

ಅಂತಿಮವಾಗಿ ಎಲ್ಲಾ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗಿ ಪ್ರಸಾದ ಸ್ವೀಕರಿಸಿದರು.