05 February 2026 | Join group

ಕಾಯಿಲೆ-ದುಃಖ ರಹಿತ ಬದುಕಿಗೆ ಉಚಿತ 10 ದಿನಗಳ ಪ್ರಾಣಾಯಾಮ–ಧ್ಯಾನ ಶಿಬಿರ | ಫೆ.6 ರಿಂದ ಕಲ್ಲಡ್ಕದಲ್ಲಿ ಆರಂಭ

  • 04 Feb 2026 11:40:31 AM

ಋಷಿ ಸಂಸ್ಕೃತಿಯ ಜ್ಞಾನವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ 'ಧೀಶಕ್ತಿ ಜ್ಞಾನಯೋಗ ಶಿಬಿರ', ಮಂಗಳೂರು ಇವರ ವತಿಯಿಂದ ಕಾಯಿಲೆ ಹಾಗೂ ದುಃಖ ರಹಿತ ಜೀವನಕ್ಕಾಗಿ 10 ದಿನಗಳ ಉಚಿತ ಪ್ರಾಣಾಯಾಮ–ಧ್ಯಾನ ಶಿಬಿರ ಆಯೋಜಿಸಲಾಗಿದೆ.

 

ಈ ಶಿಬಿರವು ಫೆಬ್ರವರಿ 6 ಶುಕ್ರವಾರದಿಂದ ಫೆಬ್ರವರಿ 15 ರವಿವಾರದವರೆಗೆ ಪ್ರತಿದಿನ ಸಂಜೆ 6.00 ರಿಂದ 9.00 ಗಂಟೆಯವರೆಗೆ, ಬಂಟ್ವಾಳ ತಾಲೂಕಿನ ಕಲ್ಲಡ್ಕ 'ಪೂರ್ಲಿಪಾಡಿಯ ಮರಾಟಿ ಭವನದಲ್ಲಿ' ನಡೆಯಲಿದೆ.

 

ಸಾವಿರಾರು ವರ್ಷಗಳ ಹಿಂದಿನಿಂದಲೇ ಭಾರತದಲ್ಲಿ ಯೋಗ ಪರಂಪರೆ ಬೆಳೆಯುತ್ತ ಬಂದಿದ್ದು, ಇಂದು ವಿಶ್ವವೇ ಯೋಗಕ್ಕೆ ಶರಣಾಗಿದೆ. ಚಿಕಿತ್ಸೆಯಿಂದ ಗುಣಪಡಿಸಲಾಗದ ಅನೇಕ ರೋಗಗಳನ್ನು ನಿವಾರಿಸುವ ಹಾಗೂ ತಡೆಯುವ ಶಕ್ತಿ ಪ್ರಾಣಾಯಾಮಕ್ಕೆ ಇದೆ ಎನ್ನಲಾಗುತ್ತದೆ. ಒತ್ತಡಭರಿತ ಜೀವನದ ನಡುವೆ ಮಾನಸಿಕ ನೆಮ್ಮದಿ ಹಾಗೂ ದೈಹಿಕ ಆರೋಗ್ಯಕ್ಕಾಗಿ ಧ್ಯಾನ ಮತ್ತು ಪ್ರಾಣಾಯಾಮ ಅತ್ಯಂತ ಅಗತ್ಯವೆಂದು ಆಯೋಜಕರು ತಿಳಿಸಿದ್ದಾರೆ.

 

ಈ ಶಿಬಿರವು ಕಳೆದ 20 ವರ್ಷಗಳಿಂದ ಯಾವುದೇ ಪ್ರಚಾರವಿಲ್ಲದೆ ಅನೇಕ ಕುಟುಂಬಗಳ ಜೀವನವನ್ನು ದುಃಖದಿಂದ ಹೊರ ತಂದು ಆರೋಗ್ಯ, ನೆಮ್ಮದಿ ಹಾಗೂ ಸಂತೋಷದ ಬದುಕಿಗೆ ದಾರಿ ತೋರಿಸಿರುವ ಅನುಭವಸಂಪನ್ನ ತರಗತಿಯಾಗಿದ್ದು, ಇಲ್ಲಿ ಪ್ರಾಣಾಯಾಮ, ಧ್ಯಾನ, ಆಹಾರ ಪದ್ಧತಿ ಮತ್ತು ಮನಸ್ಸಿಗೆ ಸಂಬಂಧಿಸಿದ ವಿಷಯಗಳು ಬೋಧಿಸಲಾಗುತ್ತವೆ. 10 ವರ್ಷ ಮೇಲ್ಪಟ್ಟ ಎಲ್ಲರೂ ಭಾಗವಹಿಸಬಹುದು.

 

ಅಶಕ್ತರು ಕುರ್ಚಿಯಲ್ಲಿ ಕುಳಿತು ಸಹ ಭಾಗವಹಿಸಬಹುದಾಗಿದೆ. ತರಗತಿಗಳು ಸಂಪೂರ್ಣ ಉಚಿತವಾಗಿದ್ದು, ಶ್ರೀ ಗುರೂಜಿಯವರು ಯಾವುದೇ ರೀತಿಯ ಕಾಣಿಕೆ ಅಥವಾ ಸನ್ಮಾನವನ್ನು ಸ್ವೀಕರಿಸುವುದಿಲ್ಲ.

 

ಕುಟುಂಬದಲ್ಲಿ ಅಜ್ಜ-ಅಜ್ಜಿ, ತಂದೆ-ತಾಯಿ, ಗಂಡ-ಹೆಂಡತಿ, ಮಕ್ಕಳು ಹಾಗೂ ಸಂಬಂಧಿಕರೊಂದಿಗೆ ಹೇಗೆ ಗೌರವದಿಂದ, ಪ್ರೀತಿಯಿಂದ ಬದುಕಬೇಕು ಎಂಬುದರ ಕುರಿತು ಸಹ ಮಾರ್ಗದರ್ಶನ ನೀಡಲಾಗುತ್ತದೆ. ಭಕ್ತಿ, ನಂಬಿಕೆ ಮತ್ತು ಸಂಪೂರ್ಣ ಶರಣಾಗತಿಯಿಂದ 10 ದಿನಗಳ ತರಗತಿಯಲ್ಲಿ ಪಾಲ್ಗೊಂಡರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಆಧ್ಯಾತ್ಮಿಕ ಸಾಧಕರಿಗೂ ಈ ಶಿಬಿರವು ಅತ್ಯುತ್ತಮ ಜ್ಞಾನವನ್ನು ನೀಡಲಿದೆ.

 

ಮೊದಲ ದಿನ ನೇರವಾಗಿ ತರಗತಿಯಲ್ಲಿ ಭಾಗವಹಿಸಬಹುದು. ಮೂರನೇ ದಿನದಿಂದ ತರಗತಿಯಲ್ಲಿ ಪಾಲ್ಗೊಳ್ಳುವ ವಿಧಾನವನ್ನು ಮೊದಲ ದಿನವೇ ಶ್ರೀ ಗುರುಗಳು ವಿವರಿಸಲಿದ್ದಾರೆ.

 

ನೋಂದಣಿಗೆ ಸಂಪರ್ಕಿಸಿ:
9900924723 | 9844269725 | 8722874046 | 8453006440
ಸರ್ವರಿಗೂ ಆದರದ ಸ್ವಾಗತ.