ಕಡೇಶಿವಾಲಯ ಗ್ರಾಮದ, ಮುಂಗೂರು ಸಮೀಪದ ಬದಿಗುಡ್ಡೆಯ ಗ್ರಾಮದೈವದ ವಾರ್ಷಿಕ ನೇಮೋತ್ಸವದ ಸಂಭ್ರಮ

  • 04 Mar 2025 11:32:09 PM

ಬಂಟ್ವಾಳ ತಾಲೂಕು, ಕಡೇಶಿವಾಲಯ ಗ್ರಾಮದ, ಮುಂಗೂರು ಸಮೀಪದ ಬದಿಗುಡ್ಡೆಯ ಗ್ರಾಮದೈವ ರಕ್ತೇಶ್ವರೀ, ಮೈಸಂದಾಯ, ಮಹಾಕಾಳಿ ದೇವಸ್ಥಾನದ 15ನೇ ವರ್ಷದ ಪ್ರತಿಭಾ ಮಹೋತ್ಸವ ಮತ್ತು ವಾರ್ಷಿಕ ನೇಮೋತ್ಸವ ಇದೇ ಬರುವ ತಾರೀಕು 20ನೇ ಗುರುವಾರ ಮಾರ್ಚ್ 2025 ರಂದು ಜರಗಲಿರುವುದು.

 

ಬದಿಗುಡ್ಡೆಯ ಗ್ರಾಮದೈವ ರಕ್ತೇಶ್ವರೀ, ಮೈಸಂದಾಯ, ಮಹಾಕಾಳಿ ದೇವಸ್ಥಾನದ 15ನೇ ವರ್ಷದ ಪ್ರತಿಭಾ ಮಹೋತ್ಸವ ಮತ್ತು ವಾರ್ಷಿಕ ನೇಮೋತ್ಸವಕ್ಕೆ ಶುಭ ಕೋರುವವರು ಸತ್ಯದೇವತಾ ಗೆಳೆಯರ ಬಳಗ(ರಿ.), ನೆತ್ತರ.

 

ಕಾರ್ಯಕ್ರಮಗಳ ವಿವರ ಈ ರೀತಿ ಇದೆ ;

ದಿನಾಂಕ 13-03-2025ನೇ ಗುರುವಾರ

ಬೆಳಗ್ಗೆ ಗಂಟೆ 10.00ಕ್ಕೆ : ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ನೇಮೋತ್ಸವಕ್ಕೆ ಗೊನೆ ಮುಹೂರ್ತ ನಡೆಯಲಿದೆ. 

ದಿನಾಂಕ 20-03-2025ನೇ ಗುರುವಾರ 

ಬೆಳಗ್ಗೆ ಗಂಟೆ 9.00ಕ್ಕೆ : ಬದಿಗುಡ್ಡೆ ದೈವಸ್ಥಾನದಿಂದ ಭಂಡಾರ ಇಳಿದು ನೇರೋಳ್ತಿಮಾರು ಗದ್ದೆಯಲ್ಲಿ ಭಂಡಾರ ಏರುವುದು.

ಬೆಳಿಗ್ಗೆ ಗಂಟೆ 10.00 ರಿಂದ : ನಾಗದೇವರಿಗೆ ಕಲಸಪೂಜೆ, ಕಲಶಾಭಿಷೇಕ, ನಾಗತಂಬಿಲ, ಆಶ್ಲೇಷಪೂಜೆ, ಪಂಚಾಮೃತ ಅಭಿಷೇಕ, ನಾಗತಂಬಿಲ ಸೇವೆಗಳು ನಡೆಯಲಿದೆ.

ಸಂಜೆ ಗಂಟೆ 4.00 ರಿಂದ : ದೈವಗಳ ನೇಮೋತ್ಸವ ಕಾರ್ಯಕ್ರಮ 

ದಿನಾಂಕ 21-03-2025ನೇ ಶುಕ್ರವಾರ 

ಸಂಜೆ ಗಂಟೆ 4.00ಕ್ಕೆ : ಮಂಗಲ ಮಂತ್ರಾಕ್ಷತೆ ಮತ್ತು ಕುರಿ ತಂಬಿಲ ಕ್ಷೇತ್ರದಲ್ಲಿ ನಡೆಯಲಿದೆ.

 

15ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ನೇಮೋತ್ಸವಕ್ಕೆ ಆದರದಿಂದ ಸ್ವಾಗತಿಸುತ್ತಿದ್ದಾರೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಬದಿಗುಡ್ಡೆ ಸಮಿತಿ, ಮುಂಗೂರು, ಕಡೇಶಿವಾಲಯ.