09 January 2026 | Join group

2002ರ ಮತದಾರ ಪಟ್ಟಿಯಿಂದ 2025ರ ಪಟ್ಟಿಗೆ ಮ್ಯಾಪಿಂಗ್: ಮತದಾರರಿಗೆ ಮಹತ್ವದ ಸೂಚನೆ

  • 05 Jan 2026 04:30:53 PM

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, 2002 ಸಾಲಿನ ಮತದಾರ ಪಟ್ಟಿಯನ್ನು 2025ರ ಮತದಾರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಪ್ರಕ್ರಿಯೆ ರಾಜ್ಯಾದ್ಯಂತ ಪ್ರಗತಿಯಲ್ಲಿದೆ. ಈ ಕಾರ್ಯದ ಉದ್ದೇಶ, ಮತದಾರರ ಮಾಹಿತಿಯನ್ನು ನಿಖರಗೊಳಿಸಿ, ದ್ವಂದ್ವ ಹಾಗೂ ತಪ್ಪು ದಾಖಲೆಗಳನ್ನು ಸರಿಪಡಿಸುವುದಾಗಿದೆ.

 

ಯಾರು ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು?

2002ರ ನಂತರ:

• ಮದುವೆಯಾಗಿ ಬೇರೆ ಪ್ರದೇಶಕ್ಕೆ ಬಂದವರು

• ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರಗೊಂಡವರು

• ಹೊಸದಾಗಿ ಮತದಾರ ಪಟ್ಟಿಗೆ ಸೇರಿರುವವರು

 

ಇಂತಹ ಮತದಾರರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬೂತ್ ಲೆವೆಲ್ ಅಧಿಕಾರಿ (BLO) ಮುಖಾಂತರ ಕಡ್ಡಾಯವಾಗಿ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು.

 

ಮ್ಯಾಪಿಂಗ್ ಮಾಡಲು ಅಗತ್ಯವಿರುವ ಮಾಹಿತಿ

ಮತದಾರರು ತಮ್ಮ ಹಿಂದೆ ವಾಸವಿದ್ದ ಹಿಂದಿನ ವಿಧಾನಸಭಾ ಕ್ಷೇತ್ರದ:

• ಭಾಗ ಸಂಖ್ಯೆ (Part Number)

• ಕ್ರಮ ಸಂಖ್ಯೆ (Serial Number)

 

ಈ ವಿವರಗಳನ್ನು ನೀಡಬೇಕು.

ಒಂದು ವೇಳೆ ನಿಮ್ಮ ಹೆಸರು ಎರಡೂ ಮತದಾರ ಪಟ್ಟಿಗಳಲ್ಲಿಯೂ ಕಂಡುಬರದಿದ್ದರೆ:

• ನಿಮ್ಮ ತಂದೆ–ತಾಯಿಯವರ ಕ್ರಮ ಸಂಖ್ಯೆ

ಅಥವಾ

• ಅಜ್ಜ–ಅಜ್ಜಿಯವರ ಕ್ರಮ ಸಂಖ್ಯೆಯನ್ನು ಸಂಬಂಧಪಟ್ಟ ಬಿ ಎಲ್ ಓ ಅಧಿಕಾರಿಗೆ ನೀಡಿ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸಬಹುದು.

 

ಬ್ಲಾಕ್ & ವೈಟ್ ಫೋಟೋ ಇರುವ ವೋಟರ್ ಐಡಿ ಹೊಂದಿರುವವರಿಗೆ ಸೂಚನೆ

ಹಳೆಯ ಬ್ಲಾಕ್ ಅಂಡ್ ವೈಟ್ ಫೋಟೋ ಇರುವ ವೋಟರ್ ಐಡಿ ಕಾರ್ಡ್ ಹೊಂದಿರುವ ಎಲ್ಲಾ ಮತದಾರರು ತಮ್ಮ ಕಾರ್ಡ್‌ನ್ನು ನವೀಕರಿಸಿಕೊಳ್ಳಬೇಕು ಎಂಬುದಾಗಿ ಚುನಾವಣಾ ಆಯೋಗದಿಂದ ಆದೇಶ ಬಂದಿದೆ.

 

ಎಲ್ಲಿ ಸಲ್ಲಿಸಬಹುದು?

• ನಿಮ್ಮ ಪ್ರದೇಶದ ಬೂತ್ ಲೆವೆಲ್ ಅಧಿಕಾರಿ (BLO)

• ಹತ್ತಿರದ ಗ್ರಾಮ ಒನ್ / ಗ್ರಾಮ ಇನ್ ಒನ್ ಕೇಂದ್ರ

• Voter Helpline ಮೊಬೈಲ್ ಅಪ್ಲಿಕೇಶನ್ ಮೂಲಕ

 

ಸಲ್ಲಿಸಬೇಕಾದ ದಾಖಲೆಗಳು

• ನಿಮ್ಮ ಇತ್ತೀಚಿನ ಕಲರ್ ಫೋಟೋ

• ಆಧಾರ್ ಕಾರ್ಡ್ ಜೆರಾಕ್ಸ್ (ಸ್ವಸಹಿಯೊಂದಿಗೆ)

 

ಕೊನೆಯ ದಿನಾಂಕ

ಜನವರಿ 10ರ ಒಳಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಇಲಾಖೆ ಮನವಿ ಮಾಡಿದೆ.

 

ತ್ವರಿತವಾಗಿ ಮಾಡಿಸಿಕೊಳ್ಳುವುದು ಅಗತ್ಯ

ಇದು ಅತ್ಯಂತ ಮಹತ್ವದ ಕಾರ್ಯವಾಗಿದ್ದು, ಸಮಯಕ್ಕೆ ಸರಿಯಾಗಿ ಮ್ಯಾಪಿಂಗ್ ಹಾಗೂ ವೋಟರ್ ಐಡಿ ನವೀಕರಣ ಮಾಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತದಾನದ ಹಕ್ಕಿನಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದೆ.

 

ಆದ್ದರಿಂದ, ಎಲ್ಲಾ ಅರ್ಹ ಮತದಾರರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಚುನಾವಣಾ ಇಲಾಖೆ ಕೋರಿದೆ.