12 February 2026 | Join group

ಮಂಗಳೂರು ಸೌತೆಕಾಯಿ… ಆದರೆ ಹೆಸರು ಮಾತ್ರ “ಮದ್ರಾಸ್ ಸೌತೆಕಾಯಿ” ಯಾಕೆ?

  • 11 Feb 2026 11:26:22 PM

ತುಳುನಾಡಿನ ಅಡುಗೆ ಪದ್ಧತಿಯಲ್ಲಿ ಕೆಲವು ಪದಾರ್ಥಗಳು ಕೇವಲ ತರಕಾರಿಗಳು ಅಲ್ಲ ಅವು ನಮ್ಮ ಸಂಸ್ಕೃತಿ.

ಅದರಲ್ಲೊಂದು ಪ್ರಮುಖವಾದದ್ದು ಮಂಗಳೂರು ಸೌತೆಕಾಯಿ.

 

ಆದರೆ ಆಶ್ಚರ್ಯವೇನೆಂದರೆ, ಬೆಂಗಳೂರು ಮಾರುಕಟ್ಟೆಗಳಲ್ಲಿ ಹಾಗೂ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಇದನ್ನು “ಮದ್ರಾಸ್ ಸೌತೆಕಾಯಿ” ಎಂದು ಕರೆಯಲಾಗುತ್ತದೆ.

 

ಇದರ ಹಿಂದೆ ಒಂದು ಇತಿಹಾಸ ಇದೆಯಾ?

ಮಂಗಳೂರು ಸೌತೆಕಾಯಿಯ ಸಸ್ಯಶಾಸ್ತ್ರೀಯ ಹೆಸರು Cucumis maderaspatensis.

ಇಲ್ಲಿರುವ “maderaspatensis” ಎಂಬ ಪದವು “Madras (ಮದ್ರಾಸ್)” ಎಂಬ ಸ್ಥಳದ ಹೆಸರುಗಳಿಂದ ಬಂದದ್ದು.

 

ಬ್ರಿಟಿಷರ ಕಾಲದಲ್ಲಿ ದಕ್ಷಿಣ ಭಾರತವೆಲ್ಲಾ “Madras Presidency” ಎಂಬ ಆಡಳಿತ ಪ್ರದೇಶದೊಳಗಿತ್ತು.

ಅಂದಿನ ದಾಖಲಾತಿಗಳಲ್ಲಿ ಈ ಬೆಳೆ ಮೊದಲು ಮದ್ರಾಸ್ ಭಾಗದಲ್ಲಿ ಗುರುತಿಸಲ್ಪಟ್ಟ ಕಾರಣದಿಂದ ಅದಕ್ಕೆ “ಮದ್ರಾಸ್ ಸೌತೆಕಾಯಿ” ಎಂಬ ಹೆಸರು ಉಳಿಯಿತು.

 

ಕರಾವಳಿಗೆ ಬಂದ ಮೇಲೆ ಕಥೆ ಬದಲಾಗಿದೆ

ನಂತರ ಸ್ಕಾಟಿಷ್ ಸಸ್ಯಶಾಸ್ತ್ರಜ್ಞ ವಿಲಿಯಂ ರಾಕ್ಸ್‌ಬರ್ಗ್ ದಕ್ಷಿಣ ಭಾರತದ ವಿವಿಧ ಪ್ರದೇಶಗಳಿಗೆ ಈ ಬೆಳೆ ಪರಿಚಯಿಸಿದರು.

ಕರಾವಳಿಯ ಮಣ್ಣು, ಮಳೆ ಮತ್ತು ಹವಾಮಾನಕ್ಕೆ ಇದು ಅಚ್ಚುಕಟ್ಟಾಗಿ ಹೊಂದಿಕೊಂಡಿತು. ಅಲ್ಲಿ ನಡೆದದ್ದೇ ದೊಡ್ಡ ಬದಲಾವಣೆ. ಈ ತರಕಾರಿ ಮಂಗಳೂರಿನ ಅಡುಗೆ ಪದ್ಧತಿಯಲ್ಲಿ ಅವಿಭಾಜ್ಯ ಅಂಗವಾಯಿತು.

 

ಮಂಗಳೂರಿನ ರುಚಿಯಾದ ಪದಾರ್ಥಗಳಲ್ಲಿ ಮಂಗಳೂರು ಸೌತೆಕಾಯಿ ಬಳಸಲಾಗುತ್ತದೆ. ಉದಾಹರಣೆಗೆ ತುಳುನಾಡಿನ ಸಾಂಬಾರ್, ಗಸಿಯಲ್ಲಿ, ಮೀನಿನ ಕರಿ, ಸಾಂಪ್ರದಾಯಿಕ ಸಸ್ಯಾಹಾರಿ ಊಟದಲ್ಲಿ ಬಳಸಲಾಗುವುದು.

 

“ಮದ್ರಾಸ್‌ನಲ್ಲಿ ದಾಖಲಾಗಿದ ಬೆಳೆ, ಮಂಗಳೂರಿನಲ್ಲಿ ಬದುಕು ಕಂಡದ್ದು — ಅದೇ ಮಂಗಳೂರು ಸೌತೆಕಾಯಿ.”