ಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಕೊ*ಲೆ ಪ್ರಕರಣದ ನ್ಯಾಯಕ್ಕಾಗಿ ವಾಹನ ಜಾಥ ಮತ್ತು ಬೆಳ್ತಂಗಡಿ ಮಿನಿ ವಿಧಾನ ಸೌದದ ಮುಂದೆ ಬೃಹತ್ ಹಕ್ಕೊತ್ತಾಯ ಸಭೆ.
ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಬೆಳ್ತಂಗಡಿ ತಾಲೂಕು, ಬೆಳ್ತಂಗಡಿ ಇದರ ವತಿಯಿಂದ ದಿನಾಂಕ 06 ಏಪ್ರಿಲ್ 2025 ನೇ ಆದಿತ್ಯವಾರ ಸೌಜನ್ಯ ಅತ್ಯಾಚಾರ ಕೊ*ಲೆ ಪ್ರಕರಣದ ನ್ಯಾಯಕ್ಕಾಗಿ ಹೋರಾಟದ ಸಲುವಾಗಿ ಅಕ್ವಿಟ್ಟಲ್ ಕಮಿಟಿ ರಚಿಸಿ, ಸೌಜನ್ಯ ಪ್ರಕರಣವನ್ನು ಹಳ್ಳ ಹಿಡಿಸಿದ ತಪ್ಪಿತಸ್ಥ ಅಧಿಕಾರಿಗಳನ್ನು ತನಿಖೆ ನಡೆಸಿ ಸೂಕ್ತ ಶಿಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ವಾಹನ ಜಾಥ ಮತ್ತು ಬೆಳ್ತಂಗಡಿ ಮಿನಿ ವಿಧಾನ ಸೌದದ ಮುಂದೆ ಬೃಹತ್ ಹಕ್ಕೊತ್ತಾಯ ಸಭೆ ನಡೆಯಲಿದೆ.
ಸೌಜನ್ಯ ಕೊ*ಲೆ ಪ್ರಕರಣ ಮತ್ತೊಮ್ಮೆ ಹೊಸ ತಿರುವು ಪಡೆಯುತ್ತಿದ್ದು ಸಾಮಾಜಿಕ ಜಾಲತಾಣ ಮತ್ತು ಇನ್ನಿತರ ವೇದಿಕೆಗಳಲ್ಲಿ ಬಹಳ ಸಡ್ಡು ಮಾಡುತ್ತಿದೆ. ಈಗ ಸೌಜನ್ಯ ಪರ ಹೋರಾಟಗಾರರು ತನಿಖಾ ತಂಡ ಕೊ*ಲೆ ನಡೆದ ತಕ್ಷಣದಲ್ಲಿ ಸರಿಯಾದ ರೀತಿಯಲ್ಲಿ ತನಿಖಾ ಕಾರ್ಯಗಳು ನಡೆದಿಲ್ಲ ಎಂಬ ಆರೋಪದೊಂದಿಗೆ ಈ ವಾಹನ ಜಾಥಾ ಮತ್ತು ಹಕ್ಕೊತ್ತಾಯ ಸಭೆಯನ್ನು ನಡೆಸಲು ನಿರ್ಧರಿಸಿದ್ದಾರೆ.
ಈ ಮೂಲಕ ರಾಜ್ಯ ಸರಕಾರಕ್ಕೆ ಸ್ಪಷ್ಟ ಸಂದೇಶವನ್ನು ನೀಡಲಿದ್ದು ತನಿಖಾ ತಂಡದಲ್ಲಿದ್ದ ಪ್ರತಿಯೊಬ್ಬರ ವಿಚಾರಣೆ ನಡೆಸಿ ಸತ್ಯಾಸತ್ಯತೆ ಜನರ ಮುಂದೆ ತರಬೇಕಾಗಿ ಬೇಡಿಕೆ ಇಡುವುದೇ ಈ ಪ್ರತಿಭಟನೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿಯವರ ನೇತೃತ್ವದಲ್ಲಿ ಯಕ್ಷಗಾನ ಭಾಗವತರದ ಪಟ್ಲ ಸತೀಶ್ ಶೆಟ್ಟಿ ರವರ ಸಾರಥ್ಯದಲ್ಲಿ ಜ್ಞಾನಶಕ್ತಿ ಸುಬ್ರಮಣ್ಯ ಕ್ಷೇತ್ರ ಪಾವಂಜೆ ಇದರ ವತಿಯಿಂದ 20ನೇ ಏಪ್ರಿಲ್ 2025 ರಂದು ಶ್ರೀ ಕ್ಷೇತ್ರ ತಿಮರೋಡಿ ಕುಂಜರ್ಪದ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಕೂಡ ನಡೆಯಲಿದೆ ಎಂದು ತಿಳಿದು ಬಂದಿದೆ.