07 December 2025 | Join group

ಉದ್ಯೋಗಿಗೆ ಸಾವು ಬಂದರೂ ಕುಟುಂಬಕ್ಕೆ 10 ವರ್ಷಗಳ ವೇತನ: ಗೂಗಲ್‌ನ ಈ ಸೌಲಭ್ಯ ಇತರ ಕಂಪನಿಗಳಿಗೆ ಮಾದರಿ!

  • 05 Dec 2025 12:36:02 AM

ವಿಶ್ವದ ಅತಿ ದೊಡ್ಡ ತಂತ್ರಜ್ಞಾನ ಸಂಸ್ಥೆಯಾದ ಗೂಗಲ್, ಉದ್ಯೋಗಿಗಳಿಗೆ ಉತ್ತಮ ವೇತನ, ಬೋನಸ್‌, ವೃತ್ತಿ ಬೆಳವಣಿಗೆ, ಆರೋಗ್ಯ ಮತ್ತು ಕೆಲಸ-ಜೀವನ ಸಮತೋಲನದಂತಹ ಅನೇಕ ಸೌಲಭ್ಯಗಳನ್ನು ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತು.

 

ಆದರೆ ಹೆಚ್ಚಿನವರಿಗೆ ತಿಳಿದಿರದ ಒಂದು ಅಪರೂಪದ ಮತ್ತು ಅಮೂಲ್ಯ ಸೌಲಭ್ಯ ಕೂಡ ಗೂಗಲ್ ಸಂಸ್ಥೆ ನೀಡುತ್ತಿದೆ. ಅದೇ ಗೂಗಲ್‌ನ Employee Death Benefit! (ಮರಣ ಭತ್ಯೆ ಸ್ಕೀಮ್)

 

ಗೂಗಲ್‌ನ ಅತ್ಯಂತ ವಿಶೇಷ ‘ಮರಣ ಭತ್ಯೆ’ — ಕುಟುಂಬಕ್ಕೆ ದೊಡ್ಡ ಭದ್ರತೆ

ಗೂಗಲ್ ತನ್ನ ಉದ್ಯೋಗಿಗಳ ಕುಟುಂಬದ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತದೆ. ಅದಕ್ಕಾಗಿ ಸಂಸ್ಥೆ ನೀಡುವ Death Benefit Policy ಈಗಾಗಲೇ ಜಗತ್ತಿನಲ್ಲೇ ಚರ್ಚೆಯ ವಿಷಯವಾಗಿದೆ.

 

ಈ ನೀತಿಯ ಪ್ರಕಾರ, ಉದ್ಯೋಗಿಯು ಮೃತಪಟ್ಟರೆ, ಬದುಕುಳಿದ ಸಂಗಾತಿಗೆ 10 ವರ್ಷಗಳವರೆಗೆ ಉದ್ಯೋಗಿಯ ಮೂಲ ವೇತನದ 50% ನೀಡಲಾಗುತ್ತದೆ. ಅಧಿಕವಾಗಿ ಮಾಸಕ್ಕೆ $12,500 ರಷ್ಟು ಮಿತಿ ಇರುತ್ತದೆ. ಭಾರತೀಯ ಕರೆನ್ಸಿ ಗೆ ಹೋಲಿಸಿದರೆ ಸುಮಾರು ರೂ. 11,22,300 ರಷ್ಟಾಗುತ್ತದೆ.

 

ಜೊತೆಗೆ, ಪ್ರತಿ ಮಗುವಿಗೆ ಮಾಸಕ್ಕೆ $1,000 (ಸುಮಾರು ರೂ. 89,780), 19 ವರ್ಷದವರೆಗೆ ಅಥವಾ ಪೂರ್ಣಕಾಲಿಕ ವಿದ್ಯಾರ್ಥಿಯಾಗಿದ್ದರೆ 23 ವರ್ಷವರೆಗೆ ನೀಡಲಾಗುತ್ತದೆ. ಈ ಸೌಲಭ್ಯ 2025 ರಲ್ಲೂ ಅನ್ವಯದಲ್ಲೇ ಇದೆ.

 

ಗೂಗಲ್ ಯಾಕೆ ಇಷ್ಟು ವಿಶೇಷ?

ಉದ್ಯೋಗಿಯೊಬ್ಬರು ತಮ್ಮ ಕೆಲಸಕ್ಕಾಗಿ ಕಂಪನಿಗೆ ಕೊಡುವ ಶ್ರಮ, ಪ್ರತಿಭೆ ಮತ್ತು ಸಮಯವನ್ನು ಗೂಗಲ್ ಗೌರವಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಉದ್ಯೋಗಿ ಸಾವಿನ ನಂತರವೂ ಅವರ ಕುಟುಂಬಕ್ಕೆ 10 ವರ್ಷಗಳ ಭದ್ರತೆ!

 

ಇದು ಲೈಫ್ ಇನ್ಸುರನ್ಸ್‌ಗೂ ಮೀರಿದ ಸುರಕ್ಷೆಯ ಭಾವನೆಯನ್ನು ನೀಡುವ ಸೌಲಭ್ಯವಾಗಿದೆ. ಗೂಗಲ್ ಜಾಗತಿಕ ಮಟ್ಟದಲ್ಲಿ “ಎಂಪ್ಲಾಯೀ-ಫಸ್ಟ್ ಕಂಪನಿ” ಯಾಕೆ ಎಂದು ಹೇಳಲಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.