ಉತ್ತರ ಪ್ರದೇಶ: ಯುಪಿ ಸರಕಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಇನ್ನು ಮುಂದೆ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ತಮ್ಮ ರಾಜ್ಯ ಭಾಷೆಯನ್ನು ಕಲಿಯಲು ಸದವಕಾಶ ದೊರೆಯಲಿದೆ. ಯುಪಿ ಯ ಶಾಲೆಗಳಲ್ಲಿ ದಕ್ಷಿಣ ಭಾಷೆಗಳನ್ನು ಪರಿಚಯಿಸಲು ಯೋಗಿ ಸರ್ಕಾರ ನಿರ್ಧಾರಕ್ಕೆ ಬಂದಿದೆ.
ಉತ್ತರ ಪ್ರದೇಶ ಸರ್ಕಾರವು ವೃತ್ತಿಪರ ಶಿಕ್ಷಣದ ಅಡಿಯಲ್ಲಿ ತಮಿಳು, ತೆಲುಗು, ಮಲಯಾಳಂ, ಕನ್ನಡ, ಮರಾಠಿ, ಬಂಗಾಳಿ ಮತ್ತು ಇತರ ಭಾಷೆಗಳನ್ನು ನೀಡಲಿದೆ. ಈ ಬಗ್ಗೆ ಕಾಶಿ ತಮಿಳು ಸಂಗಮ 4.0 ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡಿದ ಘೋಷಣೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಈ ಭಾಷೆಗಳಲ್ಲಿ ಯಾವುದನ್ನಾದರೂ ಐಚ್ಛಿಕ ವೃತ್ತಿಪರ ವಿಷಯವಾಗಿ ಆಯ್ಕೆ ಮಾಡಬಹುದು. ಈ ಕೋರ್ಸ್‌ಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಸರ್ಕಾರ ವೆಚ್ಚವನ್ನು ಭರಿಸುತ್ತದೆ. ಈ ಯೋಜನೆಯು ಸಾಂಸ್ಕೃತಿಕ ಏಕತೆ, ಭಾಷಾ ವೈವಿಧ್ಯತೆ ಮತ್ತು ಅಂತರ-ರಾಜ್ಯ ತಿಳುವಳಿಕೆಯನ್ನು ಉತ್ತೇಜಿಸುವ ಗುರಿಯ ಉಪಕ್ರಮ ಹೊಂದಿದೆ.
ಪಠ್ಯಕ್ರಮ, ಶಿಕ್ಷಕರ ನಿಯೋಜನೆ, ಸಮಯಸೂಚಿಗಳು ಮತ್ತು ಇನ್ನಿತರ ಪಾಠದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.





