22 December 2025 | Join group

Breaking News: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಗುಂಡಿನ ದಾಳಿ: 30 ಕ್ಕೂ ಹೆಚ್ಚು ಜನರ ಸಾವು, 100 ಕ್ಕೂ ಹೆಚ್ಚು ಗಾಯ!

  • 14 Dec 2025 04:05:04 PM

ಸಿಡ್ನಿ: ಆಸ್ಟ್ರೇಲಿಯಾದ ಬೀಚ್ ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹಲವಾರು ಸಾವು-ನೋವು ಸಂಭವಿಸಿದೆ. ಡಿಸೆಂಬರ್ 14, 2025 ರಂದು ಹನುಕ್ಕಾ ಕಾರ್ಯಕ್ರಮದ ಸಂದರ್ಭದಲ್ಲಿ ಬೋಂಡಿ ಬೀಚ್‌ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ವರದಿಗಳು ದೃಢಪಟ್ಟಿದೆ.

 

ಭಯೋತ್ಪಾದಕರು ಜನರ ಮೇಲೆ ಬಹಿರಂಗವಾಗಿ ಗುಂಡು ಹಾರಿಸಿದ್ದು, 30 ಕ್ಕೂ ಹೆಚ್ಚು ಜನರು ಸತ್ತಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತದೆ.

 

ಕನಿಷ್ಠ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಗುಂಡೇಟಿನ ಸದ್ದು ಮತ್ತು ಸೈರನ್‌ಗಳ ನಡುವೆ ಜನಸಮೂಹ ಚದುರಿಹೋಗುತ್ತಿರುವುದನ್ನು ವೀಡಿಯೊಗಳು ತೋರಿಸುತ್ತವೆ. ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಬೀಚ್‌ನಿಂದ ಬರುತ್ತಿರುವ ಭಯಾನಕ ದೃಶ್ಯಗಳು ಜನರನ್ನು ಬೆಚ್ಚಿ ಬೀಳಿಸಿದೆ.

 

2000 ಕ್ಕೂ ಹೆಚ್ಚು ಯಹೂದಿ ಸಮುದಾಯದ ಜನರು  ಹನುಕ್ಕಾ ಕಾರ್ಯಕ್ರಮದ ಸಂಭ್ರಮಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಈ ದಾಳಿ ನಡೆದಿದೆ.