ಕೊಲ್ಕತ್ತಾ: ಭಾರತೀಯ ಅಭಿಮಾನಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಕುರಿತ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಡಿಸೆಂಬರ್ 13, 2025ರಂದು ಭಾರತ ಪ್ರವಾಸದ ಭಾಗವಾಗಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಕ್ಕೆ ಮೆಸ್ಸಿಯನ್ನು ಬರಮಾಡಿಕೊಳ್ಳಲಾಗಿತ್ತು.
ಮೆಸ್ಸಿಯನ್ನು ಸಮೀಪದಿಂದ ನೋಡಬೇಕೆಂಬ ಕನಸಿನಲ್ಲಿ ಅಭಿಮಾನಿಗಳು ₹3,850 ಪಾವತಿಸಿ ಟಿಕೆಟ್ ಖರೀದಿಸಿದ್ದರು. ಮತ್ತು ಇನ್ನು ಕೆಲವರು ಟಿಕೆಟ್ ದರದ ಡಬಲ್ ಮೊತ್ತವನ್ನು ಪಾವತಿಸಿ ಒಮ್ಮೆಯಾದರೂ ಪುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಯನ್ನು ನೋಡಿ ಕಣ್ಣು ತುಂಬಿಸಬೇಕೆಂದು ಬಂದಿದ್ದರು. ಆದರೆ ಗ್ರೌಂಡ್ ಗೆ ಆಗಮಿಸಿದ್ದ ಮೆಸ್ಸಿ 20 ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಅಲ್ಲಿಂದ ನಿರ್ಗಮಿಸಿದ್ದು ಸೇರಿದ್ದ ಜನರನ್ನು ಆಕ್ರೋಶಗೊಳಿಸಿತು.
ಇದರಿಂದ ನಿರಾಶೆಗೊಂಡ ಅಭಿಮಾನಿಗಳು ಅರ್ಜೆಂಟೀನಾ ಜೆರ್ಸಿಗಳನ್ನು ಹರಿದು ಮೈದಾನಕ್ಕೆ ಎಸೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕ್ರೀಡಾಂಗಣದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಕೊನೆಗೆ ಕಾರ್ಯಕ್ರಮದ ಆಯೋಜಕರನ್ನು ಬಂಧಿಸುವ ಸ್ಥಿತಿಗೂ ಕಾರಣವಾಯಿತು.
ಜನರು ಮೆಸ್ಸಿಯನ್ನು ನೋಡಲು ಭಾರಿ ಹಣವನ್ನು ಪಾವತಿಸಿದರು, ಆದರೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಅವರ ಕುಟುಂಬಗಳು ಮಾತ್ರ ಅವರನ್ನು ಸುತ್ತುವರೆದರು. ಈ ಅಭಿಮಾನಿಗಳಿಗೆ ಮೆಸ್ಸಿಯನ್ನು ಒಂದು ಕ್ಷಣ ನೋಡಲು ಸಹ ಸಾಧ್ಯವಾಗಲಿಲ್ಲ. ಭಾರತದಲ್ಲಿ ಈ ವಿವಿಐಪಿ ಸಂಸ್ಕೃತಿ ಯಾವಾಗ ಕೊನೆಗೊಳ್ಳುತ್ತದೆ? ಎಂಬ ಬೇಸರವನ್ನು ಹಲವಾರು ಜನ ವ್ಯಕ್ತಪಡಿಸಿದ್ದಾರೆ.
“ಮೆಸ್ಸಿ ನಮ್ಮ ಹೀರೋ, ಆದರೆ ಅವರು ನಮ್ಮನ್ನು ನೋಡಲೇ ಇಲ್ಲ” ಎಂಬ ಅಭಿಮಾನಿಗಳ ಬೇಸರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದ ಒಳಗಡೆ ನೀರಿನ ಬಾಟಲಿ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಕುರ್ಚಿಗಳನ್ನು ಕಿತ್ತು ಎಸೆಯುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ.





