22 December 2025 | Join group

ಇಥಿಯೋಪಿಯಾ ಪ್ರಧಾನಿ ಖುದ್ದಾಗಿ ಮೋದಿ ಅವರನ್ನು ಸ್ವಾಗತಿಸಿ ವಿದಾಯಗೊಳಿಸಿದ ಕ್ಷಣಗಳು: ಮಾಹಿತಿ ಮತ್ತು ಚಿತ್ರಗಳು

  • 17 Dec 2025 10:14:57 PM

ಇಥಿಯೋಪಿಯಾ: ಪ್ರಧಾನಿ ನರೇಂದ್ರ ಮೋದಿ ಅವರು ಇಥಿಯೋಪಿಯಾ ದೇಶಕ್ಕೆ ಭೇಟಿ ನೀಡಿ ಅಲ್ಲಿನ ಪ್ರಧಾನಿ ಡಾ. ಅಬಿ ಅಹ್ಮದ್ ಅಲಿ ಅವರನ್ನು ಭೇಟಿಯಾಗಿ ಭಾರತ–ಇಥಿಯೋಪಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಇಥಿಯೋಪಿಯಾದ ಪ್ರಧಾನಿ ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಧಾನಿ ಮೋದಿಯವರನ್ನು ಬರಮಾಡಿಕೊಂಡಿರುವುದು ವಿಶೇಷ ಗಮನ ಸೆಳೆದಿದೆ.

 

ಈ ಭೇಟಿಯ ವೇಳೆ ಪ್ರಧಾನಿ ಮೋದಿ ಹಲವು ಸರ್ಕಾರಿ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ಇಥಿಯೋಪಿಯಾ ಸಂಸತ್ತಿನಲ್ಲಿ ಭಾಷಣ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಭೇಟಿ ಭಾರತ–ಇಥಿಯೋಪಿಯಾ ಸಂಬಂಧಗಳಿಗೆ ಹೊಸ ಆವೇಗ ನೀಡಿದ್ದು, ಹಂಚಿಕೊಂಡ ಮೌಲ್ಯಗಳು ಮತ್ತು ಭವಿಷ್ಯದ ಸಾಮಾನ್ಯ ದೃಷ್ಟಿಕೋನದ ಮೇಲೆ ಆಧಾರಿತ ಸಂಬಂಧವನ್ನು ಇನ್ನಷ್ಟು ಬಲಪಡಿಸಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಸಂದರ್ಭದಲ್ಲಿಯೂ ಹಾಗೂ ವಿದಾಯ ನೀಡುವ ವೇಳೆಗೂ ಇಥಿಯೋಪಿಯಾದ ಪ್ರಧಾನಿ, ಪ್ರಧಾನಿ ಮೋದಿಯವರನ್ನು ತಮ್ಮದೇ ವಾಹನದಲ್ಲಿ ಕೂರಿಸಿ ಖುದ್ದಾಗಿ ಕಾರು ಚಲಾಯಿಸಿದ ಸುಂದರ ಕ್ಷಣಗಳ ಚಿತ್ರಗಳು ಎಲ್ಲರ ಮನಸೆಳೆದಿವೆ.

ಮಾಹಿತಿ ಮತ್ತು ಚಿತ್ರಗಳು: ಅಧಿಕೃತ X ಖಾತೆ / @narendramodi