ಗುಜರಾತ್: ಪುಟ್ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ಅನಂತ್ ಅಂಬಾನಿ ಒಡೆತನದ ಗುಜರಾತ್ ನ ಜಾಮ್ ನಗರ್ ನಲ್ಲಿರುವ 'ವಂತಾರಾ' ಮೃಗಾಲಯಕ್ಕೆ ಭೇಟಿ ನೀಡಿ ಸಂಭ್ರಮಿಸಿದರು. ಅಲ್ಲಿ ಮೆಸ್ಸಿ ಮತ್ತು ಅವರ ಸಹಆಟಗಾರರು ಹಾಗೂ ಅನಂತ್ ಅಂಬಾನಿ ಕುಟುಂಬ ಸಂಭ್ರಮಿಸಿದ ಸುಂದರ ಕ್ಷಣಗಳು ಕ್ಯಾಮರಾದಲ್ಲಿ ಸೇರಿಯಾಗಿದೆ.

ಮೆಸ್ಸಿ ಮತ್ತು ಅನಂತ್ ಅಂಬಾನಿ ಗಣಪತಿ ದೇವರ ಮೂರ್ತಿಯ ಜೊತೆ ನಿಂತು ಪ್ರಾರ್ಥನೆ ಮಾಡಿದರು.

ಪುಟ್ಬಾಲ್ ಮಿನುಗುತಾರೆ ಮೆಸ್ಸಿ ವಂತಾರಾದಲ್ಲಿ ಮಹಾ ಆರತಿ ನಡೆಸಿದರು. ಮೆಸ್ಸಿಯವರ ಜೊತೆ ಇಂಟರ್ ಮಿಯಾಮಿ ತಂಡದ ಸಹ ಆಟಗಾರದ ಲೂಯಿಸ್ ಸುವಾರೆಜ್, ರೋಡ್ರಿಗೋಡಿ ಪಾಲ್ ಜೊತೆಯಾಗಿದ್ದರು.

ಲಿಯೋನಲ್ ಮೆಸ್ಸಿ ಹುಲಿ ಮತ್ತು ಇನ್ನಿತರ ಪ್ರಾಣಿಗಳ ಜೊತೆ ತಮ್ಮ ಫೋಟೋ ಕ್ಲಿಕ್ಕಿಸಿದರು.

'ವಂತಾರಾ'ದಲ್ಲಿದ್ದ ದೇವರ ಮೂರ್ತಿಗೆ ಪ್ರಾರ್ಥಿಸುವ ಮೂಲಕ ತಮ್ಮ ಭಕ್ತಿ, ಶ್ರದ್ದೆಯನ್ನು ವ್ಯಕ್ತಪಡಿಸಿದರು.

ಪುಟ್ಬಾಲ್ ದಂತಕತೆ ಮೆಸ್ಸಿಯವರನ್ನು ಹೂಮಳೆ, ಜಾನಪದ ಸಂಗೀತ ಮತ್ತು ವಿಧ್ಯುಕ್ತ ಆರತಿ ಜೊತೆಗೆ ಭವ್ಯವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಲಾಯಿತು.
ಚಿತ್ರ ಕೊಡುಗೆ: @ವಂತಾರಾ





