ಓಮನ್ : ಪ್ರಧಾನಿ ಮೋದಿ ಓಮನ್ ದೇಶಕ್ಕೆ ಭೇಟಿ ನೀಡಿದ್ದು, ಓಮನ್ ದೇಶಕ್ಕೆ ಮೋದಿ ಎರಡನೇ ಬಾರಿ ಭೇಟಿ ನೀಡಿದ್ದಾರೆ. ದ್ವಿಪಕ್ಷೀಯ ಸಂಬಂಧ ಮತ್ತು ಆರ್ಥಿಕ ಸಹಕಾರ ಬಲಪಡಿಸುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ.

ಪ್ರಧಾನಿ ಮೋದಿಗೆ ಓಮನ್ ದೇಶದ ಅತೀ ದೊಡ್ಡ ರಾಷ್ಟ್ರೀಯ ಗೌರವ ನೀಡಿದೆ. ಮೋದಿಯವರು 'ದಿ ಫಸ್ಟ್ ಕ್ಲಾಸ್ ಆಫ್ ದಿ ಆರ್ಡರ್ ಆಫ್ ಓಮನ್' ಅನ್ನು ಪಡೆದರು.

ಇದು ಪ್ರಧಾನಿ ಮೋದಿಗೆ 29 ನೇ ಅಂತರರಾಷ್ಟ್ರೀಯ ಗೌರವವಾಗಿದೆ.

ಈ ಹಿಂದೆ ರಾಣಿ ಎಲಿಜಬೆತ್ II, ಚಕ್ರವರ್ತಿ ಅಕಿಹಿಟೊ, ನೆಲ್ಸನ್ ಮಂಡೇಲಾ ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ ಅವರಂತಹ ಜಾಗತಿಕ ಐಕಾನ್‌ಗಳಿಗೆ ನೀಡಲಾಗಿದ್ದ ಗೌರವ ಇದಾಗಿದೆ.
Image credit: X account/@BJP4India





