ಕಾಂಗ್ರೆಸ್ ಶಾಸಕನ ಹೆಸರೇಳಿ ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ: ಬಿಜೆಪಿ ಪ್ರತಿಭಟನೆ

  • 04 Apr 2025 09:58:08 PM

Vinay Somaiah Sucide case, April 04, 2025 : ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಗೋಣಿಮಾರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡುಂಡಿ ಗ್ರಾಮದ ವಿನಯ್ ಸೋಮಯ್ಯ (39) ಆತ್ಮಹತ್ಯೆಗೆ ಶರಣಾಗಿರುವ ಬಿಜೆಪಿ ಕಾರ್ಯಕರ್ತ. ಆತ್ಮಹತ್ಯೆ ಮಾಡುವ ಮೊದಲು ಡೆತ್​ನೋಟ್​ನಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್​ ಮುಖಂಡ ತೆನ್ನಿರ ಮೈನಾ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಈ ವಿನಯ್ ಸೋಮಯ್ಯ.

 

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ಏಪ್ರಿಲ್ 04 ರ ಬೆಳಗ್ಗೆ 4.30ಕ್ಕೆ ನಡೆದಿದೆ. ವಾಟ್ಸಪ್​​ ಪೋಸ್ಟ್​ ಮಾಡಿ ಬಳಿಕ ಬೆಂಗಳೂರಿನ ನಾಗವಾರದ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಶಾಸಕ ಮಂಥರ್ ಗೌಡ ಹಾಗೂ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ರವರ ವಿರುದ್ಧ ಕೂಡ ಆರೋಪಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ವಿನಯ್ ಸೋಮಯ್ಯ ಪ್ರಕರಣ ರಾಜಕೀಯ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ ಮತ್ತು ಎಲ್ಲೆಡೆ ಪ್ರತಿಭಟನೆಗಳು ಶುರುವಾಗಿವೆ.

 

ವಿನಯ್ ಸೋಮಯ್ಯ ಈಗಾಗಲೇ ಮದುವೆಯಾಗಿದ್ದು, ಓರ್ವ ಮಗಳು ಇದ್ದಾಳೆ. ಬೆಂಗಳೂರಿನಲ್ಲಿ ಮ್ಯಾನ್​ಪವರ್ ಆಪರೇಟಿಂಗ್ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ವಿನಯ್ ಸೋಮಯ್ಯ ಆತ್ಮಹತ್ಯೆ ಈಗ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಇಳಿದ್ದಿದ್ದಾರೆ.