ಘಿಬ್ಲಿ ಘಿಬ್ಲಿ ಘಿಬ್ಲಿ...ಎಲ್ಲಿ ನೋಡಿರಲ್ಲಿ ಘಿಬ್ಲಿ...ಸೋಶಿಯಲ್ ಮೀಡಿಯಾದಲ್ಲಿ ತುಂಬಿ ತುಳುಕುತ್ತಿದೆ ಈ ಘಿಬ್ಲಿ. ಅಷ್ಟು ಸುಂದರವಾಗಿ ಅನಿಮೇಟೆಡ್ ಚಿತ್ರಗಳು ( Animated Image ) ಪುಕ್ಸಟೆಯಾಗಿ ಸಿಗುವುದಾದರೆ ಯಾರು ಬೇಡ ಅಂತಾರೆ ಹೇಳಿ.. ಘಿಬ್ಲಿ ಆರ್ಟ್ ಫೋಟೋ ಹಾಕೋದರಲ್ಲೇ ಬ್ಯುಸಿಯಾಗಿದ್ದರವರು, ಈಗ ಇದರ ಸಾಹಸವೇ ಬೇಡದಿತ್ತು ಅನ್ನುತ್ತಿದ್ದಾರೆ. ನೀವೇನಾದರೂ ಘಿಬ್ಲಿ ಗೆ ಫೋಟೋ ಕಳಿಸಿ ಅನಿಮೇಟೆಡ್ ಆರ್ಟ್ ಪಡೆದಿದ್ದೀರಾ ? ಎಚ್ಚರಿಕೆ ಅಂತಾರೆ ಸೈಬರ್ ತಜ್ಞರುಗಳು.
ಏನಿದು ಈ ಘಿಬ್ಲಿ ಆರ್ಟ್ ಚಿತ್ರಗಳು ?
ನಿಮ್ಮ ಫೋಟೋ ಚಾಟ್ ಜಿಪಿಟಿ ( Chat GPT ) ಗೆ ಅಪ್ಲೋಡ್ ಮಾಡಿ, ಅದನ್ನು ಘಿಬ್ಲಿ ಆರ್ಟ್ ಗೆ ಪರಿವರ್ತಿಸಿ, ಕೆಲವೇ ನಿಮಿಷಗಳಲ್ಲಿ ನಿಮ್ಮ ರೀತಿಯೇ ಕಾಣುವಂತಹ ಒಂದು ಅನಿಮೇಟೆಡ್ ಕ್ಯಾರೆಕ್ಟರ್ ( Animated Characted ) ಕೊಡುವುದೇ ಘಿಬ್ಲಿ ಆರ್ಟ್ ನ ವಿಶೇಷತೆ.
ಈ ರೀತಿ ಒಂದು ಅನಿಮೇಟೆಡ್ ಫೋಟೋವನ್ನು ತಯಾರಿಸಲು ತಿಂಗಳು ಗಟ್ಟಲೆ ಬೇಕಾದಲ್ಲಿ, ಈ ಚಾಟ್ ಜಿಪಿಟಿ ಘಿಬ್ಲಿಯಲ್ಲಿ ಕೆಲವೇ ನಿಮಿಷಗಳಲ್ಲಿ ಅಷ್ಟೇ ಚೆನ್ನಾಗಿ ಮಾಡಿಕೊಡುತ್ತದೆ. ಇದು ತಯಾರಿಸಿ ಕೊಟ್ಟ ಇಮೇಜ್ ನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಜನ ಶೇರ್ ಮಾಡಿ ಖುಷಿಪಟ್ಟಿಕೊಂಡಿದ್ದಾರೆ.
ಘಿಬ್ಲಿ ಎಲ್ಲಿಂದ ಬಂತು ?
ಇದರ ಹುಟ್ಟು ಜಪಾನಿನ ಅನಿಮೇಷನ್ ಕಂಪನಿ "ಸ್ಟುಡಿಯೋ ಘಿಬ್ಲಿ" ಆಗಿದೆ. ಅನಿಮೇಟೆಡ್ ಸಿನಿಮಾ ಮಾಡಿ ಕೊಡುವ ಕಂಪನಿ ಇದಾಗಿದೆ. ಇದರಲ್ಲಿ ತುಂಬಾ ಪಾಪ್ಯುಲರ್ ಆಗಿರೋದು "ಸ್ಪಿರಿಟೆಡ್ ಅವೇ" ( Spirited Away ), ಇದಕ್ಕೆ ಆಸ್ಕರ್ ಅವಾರ್ಡ್ ಕೂಡ ಬಂದಿದೆಯಂತೆ .
ಇದು ಹೇಗೆ ಕೆಲಸ ಮಾಡುತ್ತೆ ?
ಚಾಟ್ ಜಿಪಿಟಿ ಘಿಬ್ಲಿ ಯ ಮೂಲಕ ನಮ್ಮ ಫೋಟೋವನ್ನು ಅವರ ಸರ್ವರ್(Server)ಗೆ ಮೊದಲು ಸಂಗ್ರಹ ಮಾಡುತ್ತಾರೆ. ಆಮೇಲೆ ಅನಿಮೇಟೆಡ್ ಇಮೇಜ್ ಮಾಡುವುದರ ಮೂಲಕ ನಮಗೆ ಕೆಲವೇ ನಿಮಿಷಗಳಲ್ಲಿ ಫೋಟೋ ಮಾಡಿ ಕಳುಹಿಸಲಾಗುವುದು.
ಸೈಬರ್ ತಜ್ಞರು ಅಪಾಯದ ಬಗ್ಗೆ ಏನು ಹೇಳ್ತಾರೆ ?
ಸಾಕಷ್ಟು ಜನ ನಾವು ಎಲ್ಲಿ ಇದ್ದೇವೆ ಅಥವಾ ಯಾವ ಫೋಟೋವನ್ನು ಅಪ್ಲೋಡ್ ಮಾಡಬೇಕು ಯಾವುದನ್ನೂ ನೋಡದೆ, ನೇರವಾಗಿ ಘಿಬ್ಲಿಗೆ ಅಪ್ಲೋಡ್ ಮಾಡಿ ಬಿಡ್ತಾರೆ. ಮಕ್ಕಳಿಗೆ ಇದೊಂದು ಆಟ ಆಗಿರುವುದರಿಂದ, ತಮ್ಮ ತಂದೆ ತಾಯಿಗಳ ಫೋಟೋ ಕೂಡ ಅಪ್ಲೋಡ್ ಮಾಡ್ತಾರೆ. ಈ ರೀತಿ ಫೋಟೋ ಅಪ್ಲೋಡ್ ಮಾಡಿ ಫ್ರೀಯಾಗಿ ಯಾಕೆ ಕೊಡ್ತಾ ಇದ್ದಾರೆ, ಇದರ ಹಿಂದಿನ ಉದ್ದೇಶವನ್ನು ನಾವು ಅರಿಯದೆ ತಪ್ಪು ಮಾಡ್ತಾ ಇದ್ದೇವೆ.
ಒಮ್ಮೆ ಅಪ್ಲೋಡ್ ಮಾಡಿದ ಫೋಟೋ ಮತ್ತೆ ನಮಗೆ ಸಿಗಲ್ಲ. ಅದು ಆರ್ಟ್ ಮೂಲಕ ಸಿಗುತ್ತೆ ಹೊರತ್ತು ಅಪ್ಲೋಡ್ ಮಾಡಿದ ಫೋಟೋ ಅಳಿಸಲಾಗುವುದಿಲ್ಲ. ನೀವು ಕಳಿಸಿದ ಫೋಟೋ ಎಲ್ಲಿ ಸಂಗ್ರಹ ಆಗುತ್ತದೆ ಎಂಬುವುದು ಯಾರಿಗೆ ಗೊತ್ತಿಲ್ಲ. ನಾವು disclaimer ನ್ನು ಸರಿಯಾಗಿ ಓದದೇ, ಎಲ್ಲಾ ಕಂಡಿಷನ್ಸ್ ಗೆ ಅನುಮತಿ ಕೊಟ್ಟು ನಾವೇ ಕೋಲು ಕೊಟ್ಟು ಪೆಟ್ಟು ತಿಂದಂತೆ.
ಸೈಬರ್ ತಜ್ಞರ ಪ್ರಕಾರ ತೊಂದರೆಗಳ ಪಟ್ಟಿ
ನಾವು ಅಪ್ಲೋಡ್ ಮಾಡುವ ಫೋಟೋಗಳನ್ನೂ ಇವರು ಬೇರೆ ಕಡೆ ಉಪಯೋಗಿಸಬಹುದು.
ನಿಮ್ಮ ಫೋಟೋಗಳು ಎಲ್ಲಿ ಬೇಕಾದರೂ ಹರಿದಾಡಬಹುವುದು.
ಯಾವೆಲ್ಲಾ ದೇಶಗಳಲ್ಲಿ ಹರಿದಾಡಬಹುವುದು ಎನ್ನುವುದು ನಮಗೆ ತಿಳಿದೇ ಇರುವುದಿಲ್ಲ.
ಎಲ್ಲಿ ನಿಮ್ಮ ಫೋಟೋ ಮಾರಾಟವಾಗಬಹುದು ಎನ್ನುವ ಮಾಹಿತಿ ನಮಗೆ ಇರಲ್ಲ.
ನೀವು ಕಳುಹಿಸಿದ ಫೋಟೋವನ್ನು ಬಳಸಿ ನಿಮ್ಮ ವೈಯಕ್ತಿಕ ಅಕೌಂಟ್ ಗಳಿಗೆ ಖನ್ನಾ ಹಾಕಬಹುದು.
ಅಪ್ಲೋಡ್ ಮಾಡಿದ ಹೆಣ್ಣು ಮಕ್ಕಳ ಫೋಟೋ ಅಶ್ಲೀಲವಾಗಿ ಪರಿವರ್ತಿಸಿ ಬೇರೆ ಕಡೆ ಮಾರಾಟ ಮಾಡಬಹುದು.
ಒಮ್ಮೆ ಇಂಟರ್ನೆಟ್ ಗೆ ಹೋದರೆ ಮತ್ತೆ ವಾಪಾಸ್ ತಗೊಳ್ಳುವ ಹಾಗೆಯೇ ಇಲ್ಲ.
ಆದ್ದರಿಂದ, ಈ ರೀತಿಯ ಅಪ್ಪ್ಲಿಕೇಷನ್ಸ್ ಗಳಿಗೆ ಮಾರು ಹೋಗದೆ, ಬಳಸುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ತಜ್ಞರುಗಳು.