ಸಿಎಂ ಚಿನ್ನದ ಪದಕ ಪಡೆದ ಪೊಲೀಸ್ ಇನ್ಸ್‌ಪೆಕ್ಟರ್‌ ಮೇಲೆ ಚಿನ್ನ ಎಗರಿಸಿದ ಆರೋಪ, ಉಳ್ಳಾಲ ಠಾಣೆಯಲ್ಲಿ ನಡೆದ ಘಟನೆ

  • 05 Apr 2025 12:02:52 PM

ಸಿಎಂ ಅವರಿಂದ ಚಿನ್ನದ ಪದಕ ಪಡೆದ ಪೊಲೀಸ್ ಅಧಿಕಾರಿಯೇ ಚಿನ್ನ ಎಗರಿಸಿದ ಗಂಭೀರ ಆರೋಪ ಮತ್ತೊಮ್ಮೆ ಪೊಲೀಸ್ ಇಲಾಖೆ ಮೇಲೆ ಕಪ್ಪು ಚುಕ್ಕೆ ತಂದಿದೆ. ಕೆಲವೇ ದಿನಗಳ ಹಿಂದೆ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಕ್ಕೆ ಭಾಜನರಾಗಿದ್ದ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್​​ ಕುಮಾರ್ 4 ಕೋಟಿ ರೂ. ಮೌಲ್ಯದ ಮನೆ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ದಾಳಿ ಎಸ್ಕೇಪ್ ಆಗಿದ್ದ ವಿಷಯ ಬಹಳಷ್ಟು ಸುದ್ದಿ ಮಾಡಿತ್ತು.

 

ಇದೀಗ, ಆರೋಪಿಯ ಮೈಮೇಲಿದ್ದ 50 ಗ್ರಾಮ್‌ ಚಿನ್ನ ಎಗರಿಸಿದ ಆರೋಪ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿರುದ್ಧ ದಾಖಲಾಗಿದೆ. ಮಂಗಳೂರುಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ಬಾಲಕೃಷ್ಣ ನಾಯಕ್‌ ಅವರು ಪ್ರಕರಣವೊಂದನ್ನು ಮುಚ್ಚಿ ಹಾಕಲು 3 ಲಕ್ಷ ರೂಪಾಯಿ ಲಂಚದ ಜೊತೆ ಆರೋಪಿಯ ಮೈಮೇಲಿದ್ದ 50 ಗ್ರಾಮ್​ ಚಿನ್ನವನ್ನು ಕೂಡ ದೋಚಿದ್ದಾರೆ ಎಂದು ಆರೋಪ ಮಾಡಲಾಗಿದೆ.

 

ಲಂಚ ಕೇಳಿದ ಪೊಲೀಸಪ್ಪ

ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿ ಮಾರ್ಚ್ 13ರಂದು ಇನ್ಸ್‌ಪೆಕ್ಟರ್‌ ಬಾಲಕೃಷ್ಣ ವಿರುದ್ಧ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ಅವರಿಗೆ ದೂರು ನೀಡಿದ್ದರು. ಕಳವು ಪ್ರಕರಣದಲ್ಲಿದ್ದ ನನ್ನ ಮಗನನ್ನು ಉಳ್ಳಾಲ ಪೊಲೀಸರು 2024ರ ಜೂನ್ 28ರಂದು ವಶಕ್ಕೆ ಪಡೆದಿದ್ದರು. ಈ ಸಂಬಂಧ ಮಾತನಾಡಲು ಉಳ್ಳಾಲ ಪೊಲೀಸ್ ಠಾಣೆಗೆ ಬರಬೇಕೆಂದು ತಿಳಿಸಿದ್ದರಂತೆ. ಇವರ ಮನವಿಯಂತೆ ಆರೋಪಿಯ ತಾಯಿ ಮರುದಿನ ಉಳ್ಳಾಲ ಠಾಣೆಗೆ ಭೇಟಿ ನೀಡಿದ್ದರು . ಈ ಪ್ರಕರಣವನ್ನು ಮುಚ್ಚಿ ಹಾಕಲು 3 ಲಕ್ಷ ರೂ. ಬೇಡಿಕೆ ಇಟ್ಟಿದ್ದರಂತೆ ಮತ್ತು ಅದೇ ರೀತಿ ಆರೋಪಿಯ ತಾಯಿ ಜುಲೈ1ರಂದು ಉಳ್ಳಾಲ ಠಾಣೆಯಲ್ಲೇ ಇನ್ಸ್‌ಪೆಕ್ಟರ್‌ ಬಾಲಕೃಷ್ಣ ಅವರಿಗೆ ಹಣ ನೀಡಿದ್ದಾರಂತೆ.

 

ಮುಂದಕ್ಕೆ ಏನಾಯಿತು ?

ಹಣ ಲಂಚ ಪಡೆದರೂ ಸಹ ಮಗನನ್ನು ಆರೋಪಿಯಾಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ, ಮಗನ ಮೈಯಲ್ಲಿದ್ದ ಬಂಗಾರದ ಸರ, ಒಂದು ಬ್ರಾಸ್ಲೇಟ್, ಒಂದು ಕಡಗ, ಮೂರು ಉಂಗುರ, ಒಂದು ಕಿವಿಯ ಓಲೆ ಸೇರಿ ಒಟ್ಟು 50 ಗ್ರಾಮ್ ಚಿನ್ನಾಭರಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದರು ಮತ್ತು ಇದರ ಲೆಕ್ಕವನ್ನು ಚಾರ್ಜ್ ಶೀಟ್‌ನಲ್ಲಿ ಹಾಕುತ್ತೇನೆ, ಆಮೇಲೆ ರಿಕವರಿ ಮಾಡಿಕೊಳ್ಳಬಹುದು ಎನ್ನುವ ಮಾತನ್ನು ಹೇಳಿದ್ದರಂತೆ ಇನ್ಸ್‌ಪೆಕ್ಟರ್ ಬಾಲಕೃಷ್ಣ. ಆದರೆ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟಿನಲ್ಲಿ ನನ್ನ ಮಗನ ಮೈಮೇಲಿದ್ದ ಚಿನ್ನಾಭರಣದ ಬಗ್ಗೆ ಉಲ್ಲೇಖಿಸಿಲ್ಲ. ಅದೂ ಅಲ್ಲದೆ ಮಗನಿಂದ ಖಾಲಿ ಕಾಗದಗಳಿಗೆ ಸಹಿ ಮಾಡಿಸಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ.

 

ಏನಿದು ಪ್ರಕರಣ ?

ತನ್ನ ಮನೆಯಿಂದ 15 ಲಕ್ಷ ರೂ. ಬೆಲೆಯ 32 ಪವನ್ ಚಿನ್ನಾಭರಣ ಕಳವಾಗಿದೆ ಎಂದು 2024ರ ಜೂ. 28ರಂದು ಉಳ್ಳಾಲದಲ್ಲಿ ವೃದ್ಧರೊಬ್ಬರು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ. ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಇನ್ಸ್‌ಪೆಕ್ಟರ್‌ ಬಾಲಕೃಷ್ಣ ದೂರು ನೀಡಿದ ವ್ಯಕ್ತಿಯ ಮಗ ಪಿಯುಸಿ ವಿದ್ಯಾರ್ಥಿ ಸಹಿತ ಇಬ್ಬರು ಅಪ್ರಾಪ್ತರು ಮತ್ತು ಆತನ ಮೂವರು ಗೆಳೆಯರನ್ನು ಬಂಧಿಸಿ ಚೆನ್ನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಕಳ್ಳರು ಚಿನ್ನಾಭರಣವನ್ನು ನಗರದ ಜುವೆಲ್ಲರಿಗಳಿಗೆ ಮಾರಾಟ ಮಾಡಿದ್ದರು.

 

ಇತಿಹಾಸ ಚೆನ್ನಾಗಿರಲಿಲ್ಲ, ಆದರೂ ಅವರು ಸಿಎಂ ಪ್ರಶಸ್ತಿಗೆ ನಾಮನಿರ್ದೇಶನ

ಇನ್ಸ್‌ಪೆಕ್ಟರ್‌ ಬಾಲಕೃಷ್ಣರನ್ನು ಉಳ್ಳಾಲ ಠಾಣೆಯಿಂದ ಹೊರ ದಬ್ಬಲ್ಪಟ್ಟಿದ್ದರೂ ಮತ್ತೆ ಪುನಃ ನಗರದ ಪಾಂಡೇಶ್ವರ ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ಆಗಿ ನಿಯೋಜನೆಗೊಂಡಿದ್ದರು. ಹಿಂದೊಮ್ಮೆ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದಲ್ಲಿ ಬಾಲಕೃಷ್ಣ ಮನೆಗೆ ಎಸಿಬಿ ದಾಳಿಯಾಗಿತ್ತು ಅವಾಗ ಇವರು ಮೈಸೂರು ಜಿಲ್ಲೆಯ ವಿಜಯನಗರದಲ್ಲಿ ಕರ್ತವ್ಯದಲ್ಲಿದ್ದಾರಂತೆ. ತನ್ನ ಮೈಮೇಲೆ ಇಷ್ಟೆಲ್ಲಾ ಆರೋಪಗಳಿದ್ದರು ಯಾವ ಲೆಕ್ಕಾಚಾರದಲ್ಲಿ ಇವರಿಗೆ ಸಿಎಂ ಪದಕ (CM Medal ) ಬಿರುದು ಕೊಟ್ಟಿದ್ದಾರೆ ಎನ್ನುವ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಬಹಳ ಸಡ್ಡು ಮಾಡುತ್ತಿದೆ.