ಹಾಲಿ ಹೋಗಿ ಮಾಜಿ ಪೆಗ್ ಹೊಡಿತ್ತಿದ ಬಾರ್ ಗೆ ನುಗ್ಗಿ ಲಾಂಗು ರಾಡ್‌ಗಳಿಂದ ಹೊಡೆದ ಘಟನೆ ದೊಡ್ಡ ಬಳ್ಳಾಪುರದಲ್ಲಿ ನಡೆದಿದೆ. ಸೋಮಶೇಖರ್ ಎನ್ನುವ ಯುವಕ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನಂತೆ, ಆದರೆ ಹುಡುಗಿಗೆ ಹೊಸ ಲವರ್ ನಾಹಿದ್ ಸಿಕ್ಕಿದ್ದರಿಂದ ಅವಳು ಸೋಮಶೇಖರನ್ನು ಬಿಟ್ಟು ನಾಹಿದ್ ಜೊತೆ ಸಂಪರ್ಕದಲ್ಲಿದ್ದಳಂತೆ.
ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಸ್ಟೋರಿ, ದೊಡ್ಡಬಳ್ಳಾಪುರ ನಗರದ ಶಾಂತಿನಗರ ಎಂಬಲ್ಲಿರುವ ಭಾರ್ಗವಿ ಬಾರ್‌ನಲ್ಲಿ ಈ ಹುಡುಗಿಗಾಗಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದೆ. ಹುಡುಗಿಯ ಹಳೆಯ ಪ್ರಿಯಕರನ ಮೇಲೆ ಹೊಸ ಪ್ರಿಯಕರನ ತಂಡ ಗುಂಪು ಕಟ್ಟಿಕೊಂಡು ದಾಳಿ ನಡೆಸಿದೆ. ಈ ದೃಶ್ಯ ಬಾರ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆಯಂತೆ ಮತ್ತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರಂತೆ.
ಸೋಮಶೇಖರ್ ಹುಡುಗಿಯನ್ನು ಪ್ರಶ್ನಿಸಿದಕ್ಕೆ ಹಾಲಿ ಪ್ರಿಯತಮ, 15 ಜನರ ತಂಡದೊಂದಿಗೆ ಸೋಮಶೇಖರ್ ಮಾದಕ ಪಾನೀಯವನ್ನು ಸವಿಯುತ್ತಿದ್ದಾಗ ಒಂದೇ ಸವನೆ ದಾಳಿ ಮಾಡಿದ್ದ. ಸೋಮಶೇಖರ್ ಆಸ್ಪತ್ರೆಗೆ ದಾಖಲಾಗಿದ್ದಾನೆ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರಂತೆ.