ಮಂಗಳೂರು : ಪ್ರಸಿದ್ಧ ಹಂಪನಕಟ್ಟೆಯ ಬಳಿಯ ಮಂಗಳೂರಿನ ಹೃದಯಭಾಗದಲ್ಲಿರುವ ಮೋತಿ ಮಹಲ್ ಗೊತ್ತಿಲ್ಲದವರಿಲ್ಲ. ಮಿಲಾಗ್ರಿಸ್‌ನಿಂದ ಕೇವಲ 0 ಕಿಮೀ ದೂರದಲ್ಲಿ ಮತ್ತು ರೈಲು ನಿಲ್ದಾಣದಿಂದ 2 ಕಿಮೀ ದೂರದಲ್ಲಿ ಮತ್ತು ವಿಮಾನ ನಿಲ್ದಾಣಕ್ಕೆ ಸುಲಭ ಪ್ರವೇಶವನ್ನು ಹೊಂದಿರುವ ಈ ಹೋಟೆಲ್, ಆಧುನಿಕ ಜೀವನಶೈಲಿಗೆ ಪೂರಕವಾಗಿರುವ ಸಮಕಾಲೀನ ಹೋಟೆಲ್ ಆಗಿದೆ. ಆದರೆ, ಇನ್ನು ಮುಂದೆ ಹೋಟೆಲ್ ಮೋತಿ ಮಹಲ್ ನೆನಪು ಮಾತ್ರ.
ಹೌದು, ಇನ್ನು ಮುಂದೆ ಮಂಗಳೂರಿನ ಹೃದಯ ಭಾಗದಲ್ಲಿರುವ ಮೋತಿ ಮಹಲ್ ಕಣ್ಮರೆಯಾಗಲಿದೆ. ಈ ಹೋಟೆಲ್ ನ ಲೀಸ್ ಮುಗಿದಿರುವ ಕಾರಣ ಹೋಟೆಲ್ ನ ಚಾಲನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರಂತೆ. ಆದ್ದರಿಂದ ಮೂಲ ಆಡಳಿತ ಮಂಡಳಿ ಬಿಟ್ಟುಕೊಡಲಾಗುವುದು ಎಂದು ತಿಳಿದು ಬಂದಿದೆ.
ಮೋತಿ ಮಹಲ್ ನ ವೈಶಿಷ್ಟತೆ
ಹೋಟೆಲ್ ಬಹು ಆಹಾರ ಮತ್ತು ಪಾನೀಯ ಮಳಿಗೆಗಳೊಂದಿಗೆ 90 ಉತ್ತಮವಾಗಿ ನಿಯೋಜಿಸಲಾದ ಕೊಠಡಿಗಳನ್ನು ಹೊಂದಿದೆ. ಹೋಟೆಲ್‌ನ ಸ್ಥಳವು ವ್ಯಾಪಾರ ಸಭೆಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸಲು ಸೂಕ್ತವಾಗಿದೆ. ಹೋಟೆಲ್ 1000 ಅತಿಥಿಗಳಿಗೆ ಅವಕಾಶ ಕಲ್ಪಿಸುವ ಔತಣಕೂಟ ಸಭಾಂಗಣವನ್ನು ನೀಡುತ್ತದೆ. ಈ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದ ಮೋತಿ ಮಹಲ್ ಮಂಗಳೂರು ನಗರದ ಅತ್ಯಾಧುನಿಕ ಹೋಟೆಲ್ ಎಂದೇ ಪ್ರಸಿದ್ಧಿಯಾಗಿತ್ತು.
ಹೋಟೆಲ್ ಸ್ಥಾಪಿಸಿದ ಉದ್ಯಮಿ ಎ.ಜೆ ಶೆಟ್ಟಿ
ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಒಂದು ಪ್ರತಿಷ್ಠಿತ ಹೋಟೆಲ್ ಬೇಕೆಂಬ ಉದ್ದೇಶದಿಂದ ಉದ್ಯಮಿ ಎ.ಜೆ ಶೆಟ್ಟಿಯವರು ಈ ಸುಂದರವಾದ ಹೋಟೆಲ್ ಸ್ಥಾಪಿಸಿದ್ದರು. ಅತಿಥಿಗಳಿಗೆ ಭಾರತೀಯ ಆತಿಥ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವಲ್ಲಿ ಎರಡು ದಶಕಗಳ ನಿಷ್ಪಾಪ ಸೇವೆ. "ಹೋಟೆಲ್ ಮೋತಿ ಮಹಲ್" ಅತ್ಯುತ್ತಮ ಹೋಟೆಲ್‌ಗಳಲ್ಲಿ ಮೊದಲನೆಯದು.
ಮೀಟಿಂಗ್ ಪಾಯಿಂಟ್
ಬಹಳಷ್ಟು ಜನ, ಮೋತಿ ಮಹಲ್ ಹೋಟೆಲ್ ನ್ನು ಮೀಟಿಂಗ್ ಪಾಯಿಂಟ್ ಆಗಿ ಭೇಟಿಯಾಗುವ ಸ್ಥಳವಾಗಿತ್ತು. ಬಹಳಷ್ಟು ವ್ಯಾಪಾರಕ್ಕೆ ಸಂಬಂಧಪಟ್ಟ ವ್ಯವಹಾರಗಳು ಕೂಡ ಈ ಹೋಟೆಲ್ ನಲ್ಲಿ ನಡೆಯುತಿತ್ತು ಮತ್ತು ಬಹಳಷ್ಟು ಬಿಸಿನೆಸ್ ಗಳು ಇಲ್ಲಿಂದ ಶುರುವಾಗಿದೆ ಎಂದು ಜನ ತಮ್ಮ ಅನುಭವಗಳನ್ನು ತೋಡಿಕೊಂಡಿದ್ದಾರೆ.
ದೊಡ್ಡ ಈಜುಕೊಳ
ಮೋತಿ ಮಹಲ್ ಹೋಟೆಲ್ ನಲ್ಲಿ ದೊಡ್ಡ ಈಜುಕೊಳ ಇದೆ. ತಂಗುವ ಯಾತ್ರಿಗಳು ಈ ಈಜುಕೊಳದಲ್ಲಿ ಈಜುತ್ತಾ ಸಮಯ ಕಳೆಯುತ್ತಿದ್ದರು. ಜನರು ಹೇಳುವ ಪ್ರಕಾರ ಬಹಳಷ್ಟು ಜನ ಆ ಈಜುಕೊಳದಲ್ಲಿ ಸ್ವಿಮ್ಮಿಂಗ್ ಕೂಡ ಕಲಿತಿದ್ದಾರಂತೆ.
ಈ ನಿರ್ಧಾರದ ಹಿಂದಿನ ಗಾಸಿಪ್
ಕೆಲವು ಮೂಲಗಳ ಪ್ರಕಾರ ಮೋತಿ ಮಹಲ್ ಹೋಟೆಲ್ ನ್ನು ಬೆಂಗಳೂರಿನ ಒಬ್ಬ ಪ್ರತಿಷ್ಠಿತ ಉದ್ಯಮಿ ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂಬ ವದಂತಿ ಇದೆ. ನಗರದ ಮಿಲಾಗ್ರಿಸ್ ನಲ್ಲಿರುವ ಧಾರ್ಮಿಕ ಕೇಂದ್ರದ ಭೂ ವಿವಾದದ ಕಾರಣದಿಂದ ಈ ರೀತಿಯ ನಿರ್ಧಾರ ಆಗಿದೆ ಎಂದು ಕೂಡ ತಿಳಿದು ಬಂದಿದೆ.
ಏನೇ ಇರಲಿ, ಮಂಗಳೂರಿನ ಜನತೆ, ಮಂಗಳೂರಿಗೆ ನಾನಾ ಕಾರಣಕ್ಕಾಗಿ ಬರುವ ಪ್ರವಾಸಿಗರು ಮೋತಿ ಮಹಲ್ ಹೋಟೆಲ್ ನ್ನು ಮಿಸ್ ಮಾಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. "ವಿ ವಿಲ್ ಬಿ ಗೋಯಿಂಟ್ ಟು ಮಿಸ್ ಮೋತಿ ಮಹಲ್" ಎನ್ನುತ್ತಾರೆ ಮಂಗಳೂರು ಜನತೆ.