ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಯಲಿದೆ, ವಿಶ್ಲೇಷಕರ ಭವಿಷ್ಯವಾಣಿ - ಎಷ್ಟು ಇಳಿಯಬಹುದು ಎಂದು ಕೇಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ

  • 06 Apr 2025 12:37:25 PM

Gold Price, April 06, 2025 : ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಈ ಕಾಲಘಟದಲ್ಲಿ, ಕೆಲ ಬಂಗಾರದ ವಿಶ್ಲೇಷಕರು ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಭಾರಿ ಗಾತ್ರದಲ್ಲಿ ಕುಸಿಯಲಿದೆ ಎಂಬ ಭವಿಷ್ಯವಾಣಿ ನೀಡಿದರೆ ಹೇಗೆ ಅನಿಸಲಿದೆ ? ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಿದ ಹಾಗೆ ಅಲ್ಲವೇ ? ಹೌದು, ಈ ರೀತಿಯ ಒಂದು ಭವಿಷ್ಯವಾಣಿ ಈಗ ಸುದ್ದಿ ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

 

ಭಾರತೀಯರಿಗೆ ಬಂಗಾರ ಎಂದರೆ ಪಂಚಪ್ರಾಣ, ಕೆಲವರು ಹೂಡಿಕೆಯಾಗಿ ಚಿನ್ನವನ್ನು ಬಳಸಲ್ಪಟ್ಟರೆ, ಮಹಿಳೆಯರು ಸೌಂದರ್ಯಕ್ಕಾಗಿ ಬಳಸುತ್ತಾರೆ. ಆದರೆ ಇತೀಚಿನ ದಿನಗಳಲ್ಲಿ ಬಂಗಾರದ ಅಂಗಡಿ ಒಳಗೆ ಹೋಗುವುದು ಬಿಡಿ, ಅದರ ಹತ್ತಿರ ಕೂಡ ಹೋಗಲು ಚಿನ್ನ ಪ್ರಿಯರು ಹೆದರುತ್ತಿದ್ದಾರೆ. ಕಾರಣ ಇಷ್ಟೇ, ಕೈಗೆಟಕದ ಚಿನ್ನದ ಬೆಲೆ.

 

ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಈಗಾಗಲೇ 24 ಕ್ಯಾರಟ್ ಚಿನ್ನದ ಬೆಲೆ ಚಿನ್ನದ ಬೆಲೆ 90,000 ರೂ. ಗಡಿ ದಾಟಿದ್ದು, ಲಕ್ಷದ ಗಡಿ ತಲುಪುವ ರೇಸ್ ನಲ್ಲಿದೆ. ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಿ ಭರ್ಜರಿ ಲಾಭ ಪಡೆಯುತ್ತಿದ್ದರೆ, ಮಧ್ಯಮ ವರ್ಗದವರು ಅಂತೂ ಈಗ ಬಂಗಾರದ ಕಡೆ ತಲೆ ಹಾಕಿ ಕೂಡ ಮಲಗುತ್ತಿಲ್ಲ.

 

ಆದರೆ, ಈಗ ಆಭರಣ ಪ್ರಿಯರಿಗೆ ಖುಷಿ ತರಿಸುವ ಒಂದು ವಿಷಯ ಬೆಳಕಿಗೆ ಬಂದಿದೆ. ಬಂಗಾರದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಯಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಬರೋಬರಿ ಶೇ. 38 ರಷ್ಟು ಚಿನ್ನದ ಬೆಲೆ ಕುಸಿತ ಕಾಣಲಿದ್ದು, ಒಂದು ವೇಳೆ ಈ ರೀತಿಯ ಕುಸಿತ ಕಂಡರೆ ಬಹಳಷ್ಟು ದೊಡ್ಡ ಸಹಾಯವಾಗಲಿದೆ.

 

ಹೌದು, ಅಮೇರಿಕಾ ಮೂಲದ ಮಾರ್ನಿಂಗ್ ಸ್ಟಾರ್ ನ ವಿಶ್ಲೇಷಕ ಜಾನ್ ಮಿಲ್ಸ್ ನುಡಿದಿರುವ ಚಿನ್ನದ ಬೆಲೆಯ ಭವಿಷ್ಯವಾಣಿ ಪ್ರಕಾರ, 24 ಕ್ಯಾರಟ್ ಚಿನ್ನದ ಬೆಲೆ ಭಾರತದಲ್ಲಿ 10 ಗ್ರಾಂ. ಗೆ ಸುಮಾರು 56,000 ವಾಗಲಿದೆ ಎಂದಿದ್ದಾರೆ. ಗೋಲ್ಡ್ ರೇಟ್ ರೂ. 60,000 ಗಿಂತ ಕಡಿಮೆ ಆಗಲಿದೆ ಎನ್ನುವ ಭವಿಷ್ಯವಾಣಿ ಜನರಲ್ಲಿ ಸಂಚಲನ ಸೃಷ್ಟಿಸಿದೆ.

 

ಹಾಗಾದರೆ ಒಂದು ಪವನ್ ಬಂಗಾರಕ್ಕೆ ಎಷ್ಟಾಗಲಿದೆ ಬೆಲೆ?

ಒಂದು ವೇಳೆ 24 ಕ್ಯಾರಟ್ ಬೆಲೆ 10 ಗ್ರಾಂ ಗೆ 56,000 ರೂ ಆದರೆ, ಒಂದು ಪವನ್ ಬಂಗಾರಕ್ಕೆ 44,800 ರೂ ಆಗಲಿದೆ. ಗರಿಷ್ಠ ಮೊತ್ತವನ್ನು ಲೆಕ್ಕಕ್ಕೆ ತೆಗೆದುಕೊಂಡರೆ, 10 ಗ್ರಾಂ ಗೆ 60,000 ರೂ. ಆದರೆ, 8 ಗ್ರಾಂ ಚಿನ್ನಕ್ಕೆ ಸುಮಾರು 48,000 ರೂ. ಗಳಷ್ಟು ಆಗಲಿದೆ.

 

ಮಾರ್ನಿಂಗ್ ಸ್ಟಾರ್ಟ್ ನಲ್ಲಿ ನಮೂದಿಸಿದ ಪ್ರಕಾರ, ಚಿನ್ನದ ಬೆಲೆಗಳು ಪ್ರಸ್ತುತ ಔನ್ಸ್ ಗೆ 3,080 ಡಾಲರ್ ಅವರು ಗಳಿಂದ 1,820 ಡಾಲರ್ ಗಳಿಗೆ ಇಳಿಯುವ ನಿರೀಕ್ಷೆ ಇದೆ ಎಂದಿದ್ದಾರೆ. ಇದು ಭಾರಿ ಇಳಿಕೆಯಾಗಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಮಾತ್ರ ಆಘಾತಕಾರಿ ಸುದ್ದಿಯಾಗಲಿದೆ.

 

ಬಂಗಾರದ ಬೆಲೆ ಭಾರಿ ಇಳಿಕೆಗೆ ಕಾರಣಗಳೇನು ?

ಈಗಾಗಲೇ ಚಿನ್ನದ ಶೇಖರಣೆ ಶೇ. 9 ರಷ್ಟು ಹೆಚ್ಚಾಗಿದ್ದು, ಬೇಡಿಕೆ ಮಾತ್ರ ಕಡಿಮೆ ಇದೆ. ಪೂರೈಕೆ ಹೆಚ್ಚಾಗಿದೆ ಆದರೆ ಬೇಡಿಕೆ ಕಡಿಮೆ ಇರುವುದರಿಂದ, ಚಿನ್ನದ ಬೆಲೆ ಕಡಿಮೆ ಮಾಡದೇ ಬೇರೆ ದಾರಿಯೇ ಇಲ್ಲ ಅನ್ನುತ್ತಿದ್ದಾರೆ ಚಿನ್ನದ ಮಾರುಕಟ್ಟೆ ವಿಶ್ಲೇಷಕರು. ಡೊನಾಲ್ಡ್ ಟ್ರಂಪ್ ನ ಇತ್ತೀಚಿನ ತೆರಿಗೆ ಸುಂಕ ಕೂಡ ಚಿನ್ನದ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ತಜ್ಞರು.

 

ಒಟ್ಟಾರೆ ಚಿನ್ನದ ಬೆಲೆ ಕುಸಿದರೆ, ಚಿನ್ನ ಪ್ರಿಯರಿಗೆ ಅದಕ್ಕಿಂತ ದೊಡ್ಡ ಖುಷಿಯ ಸಂಗತಿ ಬೇರೊಂದಿಲ್ಲ. ಹೂಡಿಕೆದಾರರಿಗೆ ಸ್ವಲ್ಪ ತಲೆ ಬಿಸಿಯಾದರು, ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ಮಾಡುಲಿರುವವರು ನಿಟ್ಟಿಸಿರು ಬಿಡಲಿದ್ದಾರೆ.