ದೇಶದ ಗೃಹ ಮಂತ್ರಿ ಅಮಿತ್ ಶಾ ರವರು ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ವಕ್ಫ್ ಕಾಯ್ದೆ, ಗಡಿ ನಿರ್ಣಯ ಮತ್ತು ಭಾಷಾ ವಿವಾದದ ಮತ್ತು ಇನ್ನಿತರ ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ.
ಈ ಸಂದರ್ಶನದಲ್ಲಿ "ನೀವು ರಾಜಕೀಯದಿಂದ ಒಂದು ದಿವಸ ಬಿಡುವು ಸಿಕ್ಕರೆ ಏನು ಮಾಡುತ್ತೀರಿ ? ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಪುಸ್ತಕಗಳನ್ನು ಓದುವುದು ಮತ್ತು ಶಾಸ್ತ್ರೀಯ ಸಂಗೀತವನ್ನು ಕೇಳುವುದರಲ್ಲಿ ಕಳೆಯುತ್ತೇನೆ". ಇದು ಎರಡು ವಿಷಯ ನನ್ನ ಮೆಚ್ಚಿನ ಹವ್ಯಾಸ ಅಂದರು.
ತನಗೆ ಪುಸ್ತಕ ಮತ್ತು ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚಿನ ಅಶಕ್ತಿ ಎಂದು ತಿಳಿಸಿದ ಅಮಿತ್ ಶಾ ರವರನ್ನು ಬಿಜೆಪಿ ಪಕ್ಷದ ಚಾಣಕ್ಯ ಎಂದೇ ಕರೆಯುತ್ತಾರೆ.
ನಿಷ್ಕ್ರಿಯ ದಿನದಂದು ಏನು ಮಾಡಲು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ಮಾತನಾಡಿದ ಶಾ, "ನನ್ನ ಬಳಿ 8,000 ಪುಸ್ತಕಗಳಿವೆ, ಅವುಗಳಲ್ಲಿ ಹಲವು ಓದಲು ಉಳಿದಿವೆ. ನನಗೆ ಶಾಸ್ತ್ರೀಯ ಸಂಗೀತವೂ ತುಂಬಾ ಇಷ್ಟ. ಸಂಗೀತ ಕೇಳುತ್ತಾ ಪುಸ್ತಕಗಳನ್ನು ಓದುತ್ತೇನೆ" ಎಂದು ಹೇಳಿದರು.
ಇದೇ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಮಾತನಾಡಿದ್ದು, ವಕ್ಫ್ ತಿದ್ದುಪಡಿ ಕಾನೂನು ಮತ್ತು ವಿರೋಧ ಪಕ್ಷಗಳ ತುಷ್ಟೀಕರಣದ ರಾಜಕೀಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಅಮಿತ್ ಶಾ, ವಕ್ಫ್ ಕಾನೂನು, ಭಾಷಾವಾರು ಸಮಸ್ಯೆ, ಒಂದು ರಾಷ್ಟ್ರ ಒಂದು ಚುನಾವಣೆ ಹಾಗೂ ಇನ್ನಿತರ ಹಲವಾರು ವಿಷಯಗಳ ಬಗ್ಗೆ ಸುಧೀರ್ಘವಾಗಿ ಉತ್ತರ ನೀಡಿದರು.