09 July 2026 |

ಎಥನಾಲ್‌ನಿಂದ ವಾಹನ ಹಾಳಾಗಿರುವ ಒಂದು ಉದಾಹರಣೆ ತೋರಿಸಿ; ದೂರು ಕಳುಹಿಸಿ – ಕೇಂದ್ರ ಸಚಿವ ನಿತಿನ್ ಗಡ್ಕರಿ ಸವಾಲು

  • 08 Jul 2026 11:19:33 AM

ನವದೆಹಲಿ: ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂಬ ಆರೋಪಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಳ್ಳಿ ಹಾಕಿದ್ದಾರೆ.

 

ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಎಥನಾಲ್‌ನಿಂದ ಹಾಳಾಗಿರುವ ಒಂದೇ ಒಂದು ಪೆಟ್ರೋಲ್ ವಾಹನವನ್ನು ತೋರಿಸಿ. ಡೀಲರ್‌ಗೆ ದೂರು ನೀಡಿ, ಅದರ ಪ್ರತಿಯನ್ನು ನನಗೂ ಕಳುಹಿಸಿ. ಇವೆಲ್ಲವೂ ಸುಳ್ಳು ಪ್ರಚಾರ” ಎಂದು ಸವಾಲು ಹಾಕಿದರು.

 

ಇತ್ತೀಚಿನ ದಿನಗಳಲ್ಲಿ E20 ಪೆಟ್ರೋಲ್ ಬಳಕೆಯ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಎಥನಾಲ್ ಮಿಶ್ರಿತ ಇಂಧನದಿಂದ ವಾಹನಗಳ ಇಂಜಿನ್‌ಗೆ ಹಾನಿಯಾಗುತ್ತದೆ ಎಂಬ ಆರೋಪಗಳು ಕೆಲ ವಲಯಗಳಲ್ಲಿ ಕೇಳಿಬಂದಿವೆ. ಆದರೆ, ಸರಿಯಾಗಿ ನಿರ್ವಹಿಸಲ್ಪಟ್ಟ ಹಾಗೂ E20ಗೆ ಹೊಂದಾಣಿಕೆಯಿರುವ ವಾಹನಗಳಲ್ಲಿ ವ್ಯಾಪಕ ಪ್ರಮಾಣದ ಎಂಜಿನ್ ಹಾನಿಗೆ ಯಾವುದೇ ದೃಢವಾದ ಪುರಾವೆಗಳು ಲಭ್ಯವಿಲ್ಲಎಂದು ಕೇಂದ್ರ ಸರ್ಕಾರ ಹಾಗೂ ಹಲವು ವಾಹನ ತಯಾರಿಕಾ ಸಂಸ್ಥೆಗಳು ತಿಳಿಸಿವೆ.

 

ಈ ಹಿನ್ನೆಲೆಯಲ್ಲಿ ಮಾತನಾಡಿದ ಗಡ್ಕರಿ, ಎಥನಾಲ್ ಇಂಧನದ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಬಾರದು ಎಂದು ಹೇಳಿದ್ದು, ಎಥನಾಲ್‌ನಿಂದ ಹಾನಿಗೊಳಗಾದ ಒಂದೇ ಒಂದು ಪೆಟ್ರೋಲ್ ವಾಹನದ ಉದಾಹರಣೆ ನೀಡುವಂತೆ ಸಾರ್ವಜನಿಕರಿಗೆ ಸವಾಲು ಹಾಕಿದ್ದಾರೆ